ಮಕ್ಕಳಿಗೆ ಆಟಗಳು ಬೇಕೇ?
====================
ಬೇಕು.. ಖಂಡಿತ ಬೇಕು ಅಂತ ಎಲ್ಲರೂ ಹೇಳ್ತಾರೆ. ವಾಸ್ತವಿಕವಾಗಿ ಮಕ್ಕಳನ್ನ ಆಡೋಕ್ಕೆ ಬಿಡ್ತೀವಾ ತಂದೆ ತಾಯಿಯರು? ಸುಮ್ಮನೆ ಒಂದಿಬ್ಬರು ತಂದೆ ತಾಯಿಯರನ್ನ ಕೇಳಿ.. ಒಬ್ಬೊಬರದು ಒಂದೊಂದು ಕಾರಣ...
ಹೊರಗಡೇ ಆಟ ಆಡೋದು ಸಾಧ್ಯವೇ ಇಲ್ಲ! ಕಾಲ ಸರಿಯಿಲ್ಲ, ವಾಹನಗಳು ಚಲಿಸುತ್ತಿರುತ್ತದೆ, ಜನಾನ ನಂಬೋಕ್ಕೆ ಆಗೋಲ್ಲ, ಆ ಮಕ್ಕಳು ಸ್ವಲ್ಪ dull, ಈ ಮಕ್ಕಳು ತುಂಬಾ ಜೋರು, ಮಗದೊಬ್ಬರು ನನ್ ಮಗುಗೆ ಚಾನ್ಸೆ ಕೊಡೋಲ್ಲ, ಮತ್ತೊಂದು ಮಗು ನನ್ ಮಗುನ ಸೇರಿಸಿಕೊಳ್ಳೊಲ್ಲ! ನಂಗೆ ಆಫೀಸ್ ಕೆಲಸ, ಮನೆ ಕೆಲಸನೇ ಸಾಕಾಗಿದೆ.. ಇನ್ನು ಆಟಕ್ಕೆ ಎಲ್ಲಿ ಕರೆದುಕೊಂಡು ಹೋಗೋದು? ಟೈಮೇ ಇಲ್ಲ, ನಂಗಂತೂ ಆಗಲ್ಲಪ್ಪ. ಹೀಗೆ ನೂರೆಂಟು ಕಾರಣಗಳು. ಈಗಂತೂ ಪಟ್ಟಣಗಳಲ್ಲಿ ಅಂದಾಜಿನ ಮಟ್ಟಿಗೆ ಶೇ ೬೦% ಪೋಷಕರ ಕತೆ ಇದೇ ಆಗಿರುತ್ತದೆ.
ಇನ್ನು ಮನೆ ಒಳಗಡೆ ಆಟಕ್ಕೆ ಬಿಟ್ಟರು ಅಂದ್ರೆ, ಅದು ಒಂದೇ ಆಡಬೇಕು! ಇನ್ನೊಂದು ಮಗು ಇದ್ರೆ ಸ್ವಲ್ಪ ಪರವಾಗಿಲ್ಲ. ಮಕ್ಕಳಿಗೆ ಇರುವ ಸಾಮಾನುಗಳನ್ನ ಹಂಚಿಕೊಳ್ಳಬೇಕು, ಜೋಪಾನವಾಗಿ ಉಪಯೋಗಿಸಬೇಕು ಅಂತ ಹೇಳಿಕೊಡವ ಗೋಜಿಗೆ ಹೋಗೋದಿಲ್ಲ. ಮಕ್ಕಳು ಕಿತ್ತಾಡ್ತಾರೆ ಅಂತ, ಮಕ್ಕಳಲ್ಲಿ ಗಲಾಟೆ ಬೇಡ ಅಂತ ಇಬ್ಬರಿಗೂ ಒಂದೇ ತರಹದ ಆಟದ ಸಾಮಾನು ಕೊಡುಸ್ತಾರೆ. ಮಕ್ಕಳ ಮೇಲೆ ಇದರ ಪರಿಣಾಮ ಏನು? ಅನ್ನುವ ದೂರದೃಷ್ಟಿ ಇರೋಲ್ಲ. ಅವರಿಗೆ ಆ ಕ್ಷಣದ ಸಮಸ್ಯೆ ಪರಿಹಾರ ಆಯ್ತಲ್ಲ ಇವತ್ತಿನ ಅಳು ಗಲಾಟೆ ಮುಗೀತಲ್ಲ ಇಷ್ಟು ಸಾಕಪ್ಪ ಅನ್ನಿಸಿರುತ್ಥೆ. ಇನ್ನು ಮರುದಿನ ಶಾಲೆಗೇ ಕಳಿಸಲು ಬೇಕಾಗುವ ತಯಾರಿ, ಆಫೀಸಿಗೆ ಹೋಗುವ ಧಾವಂತ!
ಈ ಮಕ್ಕಳ ಗಲಾಟೆ ತಡೆಯೋಕ್ಕೆ ಆಗಲ್ಲ, ನಾವುಗಳು ಕೆಲಸ ಮಾಡೋದು ಹೇಗೆ ಅಂತ ಮೊಬೈಲ್ ನಲ್ಲಿ ಏನೋ ಹಾಕಿಕೊಡ್ತಾರೆ. ಒಮ್ಮೆ ಮಕ್ಕಳಿಗೆ ಮೊಬೈಲ್ ಎಂಬ ಮಾಯಾಮೃಗದ ರುಚಿ ಹತ್ತಿದರೆ ಬಿಡುವರೇ? ಅದರ ಮುಂದೆ ಪ್ರತಿಷ್ಟಾಪನೆ ಆದ್ರೆ ಮುಗಿದು ಹೋಯಿತು. ಅವರಿಗೆ ಜನರ ಸಾಮೀಪ್ಯ, ಆತ್ಮೀಯತೆ, ಮಾತು ಎಲ್ಲವೂ ಬೇಡೆನಿಸುತ್ತದೆ. ಇನ್ನೊಬರ ಕಷ್ಟ, ಸುಖಗಳಿಗೆ ಸ್ಪಂದಿಸಲು ಮನಸಿಲ್ಲ! ಸದಾ ಮೊಬೈಲ್ ಅದರಲ್ಲಿ ಬರುವ ಕಾರ್ಟೂನ್, ವಿಡಿಯೋ, ಹಾಡು, Tik -Tok, challenge, game ಎಲ್ಲವು ಅಪ್ಯಾಯಮಾನ! ಅಲ್ಲಿ ಏನಾದರು ಆದರೆ ಅಳು, ದುಃಖ ಎಲ್ಲವು ಬರುತ್ತದೆ. ನಿಜ ಜೀವನದಲ್ಲಿ ಬೇರೆಯವರಿಗೆ ಏನಾದರೂ ಆದ್ರೆ ಹೇಗೆ ಸ್ಪಂದಿಸಬೇಕು ಅಂತ ಗೊತ್ತಿರಲ್ಲ. ಅದು ನನ್ನದಲ್ಲ, ನಮಗಾಗಿಲ್ಲವಲ್ಲ ಅನ್ನುವ ತಟಸ್ಥ ಮನೋಭಾವ. ಈ ಮಕ್ಕಳಿಗೆ ಏನಾದರು ಘಟನೆ, ಸಂಗತಿ, ಅನುಭವ, ಸಂತೋಷ, ದುಃಖ ಆದ್ರೆ ಹೇಗೆ ಹಂಚಿಕೊಳ್ಳಬೇಕು ಅಂತ ತಿಳಿದಿರೋಲ್ಲ. ಒಂಥರಾ ಒಂಟಿಯಾಗಿ ಬಿಡುತ್ತಾರೆ. ಸಾಮಾಜಿಕವಾಗಿ ಒಂಟಿ ಅನ್ನುವ ಭಾವನೆ. ಇದು ಮುಂದೆ ಖಿನ್ನತೆ (Depression), ಮಾನಸಿಕ ಅಸ್ವಸ್ವತೆ, ಖುಣಾತ್ಮಕ ಆಲೋಚನೆ, ಎಲ್ಲಾ ಇದ್ದರೂ ಇಲ್ಲದಿರುವದರ ಬಗ್ಗೆ ಯೋಚನೆ, ಕೀಳರಿಮೆ ಮುಂತಾದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಮಕ್ಕಳಿಗೆ ಆಧುನಿಕ ಕಾಲದ ಸಾಧನಗಳನ್ನು ತೋರಿಸಿ, ಎಲ್ಲವೂ ಒಂದು ಇತಿಮಿತಿಯಲ್ಲಿ ಇದ್ದರೆ ತುಂಬಾನೇ ಒಳಿತು. ಮಕ್ಕಳ ಮನಸ್ಸು ಮತ್ತು ಮೆದಳು ಒಂದು ತರಹ ಮಣ್ಣಿನ ಮುದ್ದೆ ಇದ್ದಂತೆ, ಒಳ್ಳೇದು ಯಾವುದು, ಕೆಟ್ಟದು ಯಾವುದು? ಅಂತ ಗೊತ್ತಾಗೋ ವಯಸ್ಸು ಅಲ್ಲ. ಕುಂಭಾರ ಗಡಿಗೆಗೆ ಹದ, ಆಕಾರ ಕೊಡುವಂತೆ ನಾವು ಹಿರಿಯರು ಮಕ್ಕಳಲ್ಲಿ ಒಳ್ಳೆಯ ವಿಚಾರಗಳ ಅರಿವು, ಅಭಿರುಚಿ, ಆಲೋಚನೆ, ಚಿಂತನೆ ಮೂಡಿಸಬೇಕು. ಲೋಕೋಭಿನ್ನ ರುಚಿ ಅನ್ನುವ ಹಾಗೆ ಒಂದೊಂದು ಮಗುವು ಅದಕ್ಕೆ ಇಷ್ಟ ಆಗುವ, ಪೂರಕವಾಗಿರುವ ವಿಷಯಗಳಲ್ಲಿ ಆಸಕ್ತಿ ಮೂಡಿಸಿಕೊಳ್ಳುತ್ತದೆ. ಜೀವನದಲ್ಲಿ ಇದು ಮಗುವಿಗೆ ಮುಂದೆ ಬರಲು, ಹೊಂದಿಕೊಂಡು ಹೋಗಲು ಸಹಾಯಕ.
ಈಗ ಕಾಲ ತುಂಬಾ ವೇಗವಾಗಿ ಓಡ್ತಾಇದೆ. ಬೇಡಾ ಅಂದ್ರು ನಮ್ಮ ಸುತ್ತಲಿನ ಪರಿಸರ, ಸಮಾಜ ನಮ್ಮನ್ನು ಓಡುವ ಹಾಗೆ ಮಾಡ್ತಾಯಿದೆ. ನಮ್ಮ ಜೊತೆಗೆ ಮಕ್ಕಳನ್ನು ಓಡಿಸ್ತಾ ಇದ್ದೀವಿ! ಮಕ್ಕಳ ಸಹಜ ಸ್ವಭಾವವಾದ ಕುತೂಹಲ, ಅನ್ವೇಷಣಾ ಮನೋಭಾವ ಎಲ್ಲವನ್ನ ಪಕ್ಕಕ್ಕೆ ತಳ್ಳಿ ಬಿಡ್ತಾ ಇದ್ದಿವಿ. ನಮಗೆ ಗೊತ್ತಿಲ್ಲದೇ ಮಕ್ಕಳ ಮುಗ್ಧ ಸ್ವಭಾವ, ಸಾಮೀಪ್ಯ ಎಲ್ಲವನ್ನ ಕಳೆದುಕೊಳ್ಳುತ್ತಾ ಇದ್ದೀವಿ. ಮುಂದೆ ಮಕ್ಕಳು ದೊಡ್ಡವರಾದ ಮೇಲೆ ಮಕ್ಕಳು ಒಂಟಿಯಾಗಿರಲು ಇಷ್ಟ ಪಡ್ತಾರೆ, ಅವರಿಗೆ ಮೊಬೈಲ್ ಒಂದಿದ್ರೆ ಸಾಕು ಯಾರು ಬೇಡ, ಅವರ ನಿರ್ಧಾರ (Decision ) ಅವರೇ ತೊಗೊಳ್ತಾರೆ , They are quite ಇಂಡಿಪೆಂಡೆಂಟ್ ಅಂತ ಹೆಮ್ಮೆಯಿಂದ ಹೇಳ್ತಾರೆ. ಮುಂದೊಂದು ದಿನ ವಿಪರೀತಕ್ಕೆ ಹೋದಾಗ ಎಲ್ಲಾ ಮುಗಿದುಹೋಗಿರುತ್ತದೆ. ಬೇಕೋ ಬೇಡವೋ ಒಟ್ಟಿನಲ್ಲಿ ಈ "Mobile" ಎನ್ನುವ ಮಾಯಾಮೃಗದ ಹಿಂದೆ ಬಿದ್ದಿದ್ದೇವೆ. ತಾಯಿ, ತಂದೆಯರೂ ಆದಷ್ಟು ಬೇಗನೆ ಎಚ್ಚತ್ತು ಕೊಂಡು ಮಕ್ಕಳ ಜೊತೆ ಕಾಲ ಕಳೆದು ಒಳ್ಳೆಯ ಮೌಲ್ಯಗಳನ್ನು ಹೇಳಿಕೊಟ್ಟರೆ ಅದಕ್ಕಿಂತ ಸ್ವರ್ಗ ಬೇರಿಲ್ಲ.
ಇದಕ್ಕೆಲ್ಲ ಒಂದೇ ಮದ್ದು ಮಕ್ಕಳನ್ನ ಆಡಲು ಬಿಡಿ, ಬೇರೆಯವರ ಜೊತೆ ಬೆರೆಯಲು ಬಿಡಿ. ನೀವೇ ಗಮನಿಸಿ ಅವರ ಬೆಳವಣಿಗೆ.. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಅಲ್ಲಲ್ಲೇ ತಿದ್ದಿ. ಸ್ವಚ್ಛ ಮತ್ತು ಸ್ವಾಸ್ತ್ಯ ಸಮಾಜಕ್ಕಾಗಿ ಇಷ್ಟನ್ನು ಮಾಡಲಾರಿರಾ?
ಈಗ ಹೇಳಿ ಮಕ್ಕಳಿಗೆ ಆಟಗಳು ಬೇಕೇ? ಬೇಕೇ?
ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ, ಭವಿಷ್ಯದ ಸಮಾಜಕ್ಕಾಗಿ, ಮುಂದಿನ ಪೀಳಿಗೆಯ ಸ್ವಾಸ್ಥ್ಯಕ್ಕಾಗಿ ಆಟಗಳು ಖಂಡಿತ ಬೇಕು!
- ತನುಶ್ರೀ ಎಸ್. ಎನ್
೨೬-೦೯-೨೦೧೯

No comments:
Post a Comment