ಚೌಕಭಾರ - ಭಾಗ ೨
-------------------------
ಚೌಕಭಾರ ಬಗ್ಗೆ ಮೊದಲ ಲೇಖನ ಬರೆದಾಗ, ನನ್ನ ಪರಿಚಿತರಲ್ಲಿ ಹಲವಾರು ನೆನಪುಗಳನ್ನ ಹುಟ್ಟು ಹಾಕಿದ್ದು, ಅವರ ಸವಿ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಪ್ರೀತಿಯ ಧನ್ಯವಾದಗಳು. ಈಗ ಮುಂದಿನ ಭಾಗವನ್ನು ಬರೆದಿರುವೆ.
ನನ್ನ ಮಗಳು ಚಿಕ್ಕವಳಿದ್ದಾಗ ಹರಿಹರದ ಹರಿಹರೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದೆವು. ದೇವಸ್ಥಾನದ ಕಟ್ಟೆ ಮೇಲೆ ಕಂಡ ಚೌಕಬಾರ ಕೆತ್ತನೆ ತೋರಿಸಿ ಸ್ಕೇಲ್ ನಿಂದ ಎಷ್ಟು ಚೆನ್ನಾಗಿ ಗೆರೆ ಎಳೆದಿದ್ದಾರೆ! ಅಲ್ವ ಅಮ್ಮ ಅಂತ.. ನಾವು ಶಾಲೆಯಲ್ಲಿ ಅಂಕೆ-ಸಂಖ್ಯೆ ಬರೆಯುವ ಪುಸ್ತಕದ ಹಾಳೆ ಇದ್ದ ಹಾಗೆ ಇದೆ ಅಂತ. ನಂತರ ಕೋಟಿಪುರದ ಕೋಟೇಶ್ವರ, ಹಾವೇರಿಯ ಸಿದ್ದೇಶ್ವರ ದೇವಸ್ಥಾನಗಳಿಗೆ ಕರೆದುಕೊಂಡು ಹೋದಾಗ ಅಮ್ಮ ಇಲ್ಲೂ ಅದೇ ಥರ ಇದೆಯಲ್ಲಾ ಎಂದು ತುಂಬಾ ಆಶ್ಚರ್ಯ ಪಟ್ಟಳು. ಅಮ್ಮ, ನಾವು ನೋಡಿರುವ ದೇವಸ್ಥಾನಗಳಲ್ಲಿ ಈ ಥರ ಗೆರೆಗಳು, ಚೌಕಗಳಿವೆ. ಯಾಕೆ? ಏನು ಮಾಡುತಿದ್ದರು? ಮಗಳಿಗೆ ಅದು ಚೌಕಬಾರ ಆಟ, "ನಿನ್ನ ಹಾವು-ಏಣಿ" ಆಟದ ಥರ ಮನೆ ಆಟ(Board game ). ಹೇಗೇ ಆಟ ಆಡುತ್ತಾರೆ, ಕವಡೆ ಅಂದ್ರೆ ಏನು? ಅಂತ ಒಂದೇ ಸಮನೆ ಪ್ರಶ್ನೆಗಳು? ಇದು ನಮ್ಮ ದೇಶದ ತುಂಬಾ ಹಳೆಯ ಆಟ ಅಂತ ಹೇಳಿದ್ರೆ... ಅಜ್ಜಿಗೂ ಗೊತ್ತ? ತಾತು,ಪೆರಿಗೂ ಗೊತ್ತ? ಅವರಜ್ಜಿ,ತಾತಗೂ ಗೊತ್ತ? ಎಲ್ಲ ಅಜ್ಜಿ ತಾತಗೂ ಗೊತ್ತ? ಆಗಲೇ ಕವಡೆಗಳು ಇತ್ತಾ? ಅಂತ ನೂರೆಂಟು ಪ್ರಶ್ನೆಗಳು. ಕವಡೆನ Dice ರೀತಿ ಬಳಸುತ್ತೇವೆ. ಕವಡೆ ಅಂದ್ರೆ ಕಪ್ಪೆ ಚಿಪ್ಪು ತರ ಇರುತ್ತೆ ಅಂದ್ರೆ, ಎಲ್ಲರು ಸಮುದ್ರಕ್ಕೆ ಹೋಗಿ ತಂದಿದ್ರ? ಅದನ್ನ ಗೊಂಬೆಗಳ ತರ ಫ್ಯಾಕ್ಟರಿಯಲ್ಲಿ ಮಾಡೋಕ್ಕೆ ಆಗಲ್ಲವಾ? ಅಂತ ಮತ್ತೊಂದಿಷ್ಟು ಪ್ರಶ್ನೆಗಳು. ಕವಡೆ ಸಿಗದೇ ಇದ್ದರೇ! ಅಂತ ಮಗದೊಂದು ಪ್ರಶ್ನೆ... ಆಗ ಹುಣಸೆ ಬೀಜನ ಉರುಟು ನೆಲದ ಮೇಲೆ ಉಜ್ಜಿ ಉಜ್ಜಿ ಒಂದು ಕಡೆ ಬಿಳಿ ಮಾಡ್ತಾ ಇದ್ದ್ವಿ. ಅದನ್ನ ಕವಡೆ ತರ ಉಪಯೋಗಿಸುತ್ತ ಇದ್ವಿ ಅಂತ ಹೇಳಿದೆ. ಕಾಯಿಗಳಿಗೆ ಏನು ಮಾಡ್ತಾ ಇದ್ರಿ ಅಂದಾಗ ಶೇಂಗಾ ಬೀಜ, ಹುರುಗಡಲೆ ಅಂತ ಹೇಳಿದೆ. ಯಾಕೆ! ಅಂತ ಕೇಳಿದ್ರೆ ಆಟ ಆದ ಮೇಲೆ ತಿನ್ನೋಕ್ಕೆ ಅಂತ ಅಂದೇ ;-) ೫ ಮನೆ ಯಾಕೆ ಅಂತ ಕೇಳಿದ್ರೆ, ನಂ ತಲೆ ಕೆರೆದುಕೊಂಡೆ.. ಛೆ! ಈ ಆಟ ಚಿಕ್ಕವಳಾಗಿದ್ದಾಗಿಂದ ಆಡ್ತಾ ಇದ್ರೂ ನಂಗೆ ಏನು ಗೊತ್ತಿಲ್ಲವಲ್ಲ ಅಂತ ಅನಿಸಿತು.
ಆವಾಗಿನಿಂದಲೇ ಈ ದೇಶಿಯ ಆಟಗಳ ಕುರಿತು 'ಗುಂಗಿ ಹುಳ' ನನ್ನ ತಲೆಯಲ್ಲಿ ಬಂದಿದ್ದು. ನನ್ನ ಮಗಳಿಗೆ ಈ ಆಟವನ್ನು ಹೇಳಿಕೊಡಬೇಕು. ನನ್ನ ಮಗಳಿಗೆ ಅಷ್ಟೇ ಅಲ್ಲ ಬೇರೆ ಮಕ್ಕಳಿಗೂ ಕೂಡ ನಾವು ಬಾಲ್ಯದಲ್ಲಿ ಆಡಿದ ಆಟಗಳನ್ನು ಹೇಳಿಕೊಡಬೇಕು ಅಂತ ಅನ್ನಿಸಿದ್ದು. ನಾನು ನನ್ನ ಕನಸಿನ ಲೋಕದಲ್ಲಿ ಮುಳುಗಿರುವಾಗ, ಅಮ್ಮ, ನಂಗೆ ಯಾವಾಗ ಆಟ ಹೇಳಿಕೊಡ್ತೀಯಾ ಅಂತ ಕೇಳಿದಳು. ಖಂಡಿತವಾಗಿಯೂ, ಮುಂದಿನ ರಜೆಯಲ್ಲಿ ಹೇಳಿಕೊಡ್ತೀನಿ ಅಂತ ಹೇಳಿದ್ದೆ. ಅದರಂತೆ, ಈ ಬಾರಿಯ ಬೇಸಿಗೆಯಲ್ಲಿ ಅವಳಿಗೆ ಚೌಕಾಬಾರದಲ್ಲಿ ತುಸು ಆಸಕ್ತಿ ಹುಟ್ಟಿಸಿರುವೆ.
- ಎಸ್ ಎನ್ ತನುಶ್ರೀ
೨೨/೦೭/೨೦೧೯

No comments:
Post a Comment