Sunday, October 11, 2020


ಅಳುಗುಳಿ ಮಣೆ

- ತನುಶ್ರೀ .ಎಸ್.ಏನ್ 

ಅಳುಗುಳಿಮನೆ ಅಂತಾ ಓದಿದ ತಕ್ಷಣ ಖಂಡಿತ ನಿಮೆಲ್ಲರ ಸವಿ ಸವಿ ನೆನಪುಗಳು, ಅಜ್ಜಿ, ಅಮ್ಮಮ್ಮ, ಪಾಟಿ, ಅಚ್ಚಮ್ಮ, ನಾನಿ, ಅಮ್ಮನ ಜೊತೆ ಆಟ ಆಡಿದ ಕ್ಷಣಗಳು ಉಕ್ಕರಿಸಿ ಬರುತ್ತಿದೆ ಅಲ್ವಾ! ಇದು ನಮ್ಮ ಪ್ರಾಚೀನ ಭಾರತದ ಅಬಾಕಸ್ ಅಂದ್ರೆ ತಪ್ಪೇನಿಲ್ಲ. ದಕ್ಷಿಣ ಭಾರತದಲ್ಲಿ ಹಾಸು ಹೊಕ್ಕಾದ, ನಮ್ಮೆಲ್ಲರ ಬಾಲ್ಯದ ನೆನಪುಗಳಲ್ಲಿ ಒಂದಾದ ಅಳುಗುಳಿಮನೆ ಆಟದ ಬಗ್ಗೆ ಒಂದು ಕಿರು ಪರಿಚಯ.

ಈ ಮಣೆಯು ಮರ, ಹಿತ್ತಾಳೆ, ಕಲ್ಲುಗಳಲ್ಲಿ ಕೆತ್ತಿರುವುದು ನೋಡಬಹುದು. ಏನು ಇಲ್ಲದಿದ್ದರೂ ನೆಲದ ಮೇಲೆ ವೃತ್ತ ಬರೆದು ಆಡಬಹುದು. ಮಣೆಯ ಗುಂಡಿಗಳಿಗೆ ಗುಂತಲು, ಕುಳಿ, ಗೋಟು,ಗುಣಿ , ಹಳ್ಳ ಎನ್ನುವುದುಂಟು. ನದಿಯ ತಟದ ಬಂಡೆಗಳಲ್ಲಿ ಸಹ ನೋಡಬಹುದು. 

ಅಳುಗುಳಿ ಮಣೆ  ಆಟವನ್ನ ಚನ್ನೇ ಮಣೆ, ಚನ್ನ ಮಣೆ, ಅಳುಗುಳಿಮಣೆ, ಗುಳಿ ಮನೆ, ಗೋಟಿ ಮಣೆ , ಹರಳು ಮಣೆ, ಹರಳು ಮನೆ, ಹಳಗುಣಿ ಮಣೆ , ಹಳ್ಳಗುಳ್ಳಿ ಮನೆ, ಪತ್ತ ಮಣೆ, ಕುಡ್ಗೊಳ್ ಮಣಿ ಅಂತೆಲ್ಲ ಕರ್ನಾಟಕದಲ್ಲಿ ಕರೆಯುವುದು.

ಆಂಧ್ರದಲ್ಲಿ - వాన-గుంతల పీట, వామన గుంటలు, ವಾಮನ ಗುಂತಲು, ವಾನಗಲ್ಲ ಪೀಠ, ವಾಮನ ಗುಂಟ ಪೀಠ,

ಕೊಂಕಣಿ ಪ್ರದೇಶದಲ್ಲಿ ಗುರಪಾಲೆ , ಗುರ್ಪಲೆ 

ತಮಿಳ್ ನಾಡಿನಲ್ಲಿ பல்லாங்குழி  ಪಲ್ಲಂಕುಜ್ಹಿ, ಪಲ್ಲಂಗುಜ್ಹಿ  

ಕೇರಳದಲ್ಲಿ പല്ലാങ്കുഴി

ರಾಯಲಸೀಮೆ ಪ್ರದೇಶದಲ್ಲಿ ಗೋಟುಗುಣಿ ಆಟ,

 

ಕರ್ನಾಟಕದಲ್ಲಿ, ತಮಿಳುನಾಡಿನಲ್ಲಿ ಒಂದು ಬದಿಗೆ ೭ ಗುಣಿ ಒಟ್ಟು ೧೪ ಗುಣಿಗಳಿರುವ ಮಣೆಯನ್ನು ಸಾಮಾನ್ಯವಾಗಿ ಕಾಣಬಹುದು. ಆಂಧ್ರದಲ್ಲಿ ಒಂದು ಬದಿಗೆ ೫ ಮತ್ತು ೭ ಗುಣಿ ಒಟ್ಟು ೧೦ ಮತ್ತು ೧೪ ಗುಣಿಗಳಿರುವ ಚನ್ನೆಮಣೆಯ ಮಣೆಯನ್ನು ಸಾಮಾನ್ಯವಾಗಿ ಕಾಣಬಹುದು. ನದಿಯ ತಟದಲ್ಲಿ, ಬಂಡೆಯ ಮೇಲೆ, ಐತಿಹಾಸಿಕ ಸ್ಥಳಗಳಲ್ಲಿ, ದೇವಾಲಯದ ಪ್ರಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಳಿಗಳು ಇರುವುದು ಸಹ ಕಾಣಬಹುದು. ಗುಳಿಗಳು ಬೆಸ ಸಂಖ್ಯೆಯಲ್ಲಿ ಅಂದರೆ, ೯-೧೧-೧೫-೨೧ ಗುಣಿಗಳಲ್ಲಿ ಇರುತ್ತದೆ.  ಹಾಗೆಯೇ ಇದಕ್ಕೆ ಉಪಯೋಗಿಸುವ ಕಾಯಿಗಳು ಸಹ ವಿಧ ವಿಧ i.e. ಕವಡೆ, ಚನ್ನೇ ಕಾಯಿ, ಹೊಂಗೆ ಮರದ ಬೀಜ, ಗುಲಗಂಜಿ, ಮಂಜೊಟ್ಟಿ , ಮಂಜಾಡಿ, ಹುಣಸೆಬೀಜ, ಹುರಳಿಕಾಳು ಇತ್ಯಾದಿ. ಏನು ಇಲ್ಲವೇ, ಕಡಲೆಬೀಜ/ ಶೇಂಗಾಬೀಜ ಸಹ ಉಪಯೋಗಿಸಬಹುದು. ಆಟದಲ್ಲಿ ಗೆದ್ದವರಿಗೆ ಬೀಜ ಅಂತ ಪಣ ಕೂಡ ಇರುತ್ತಿತ್ತು.

ಇನ್ನು ಆಟಗಳ ಹೆಸರು, ಪ್ರಕಾರವಂತೂ ಒಂದಕ್ಕಿಂತ ಒಂದು ರೋಚಕ. ಕಾಯಿಗಳನ್ನು ಎತ್ತುವ ಮನೆ, ಬಿಡುವ ಪ್ರಕಾರದಲ್ಲಿ, ಬಾಚಿಕೊಳ್ಳುವ ಮನೆ ರೀತಿಯಲ್ಲಿ ಬೇರೆ ಬೇರೆ ಆಟದ ಪ್ರಕಾರವಿದೆ. ಸುಮಾರು ೨೦ಕ್ಕಿಂತ ಹೆಚ್ಚು ಆಟಗಳು ಇದೆ. ಸಾದಾ ಆಟ, ಪತ್ತದ ಆಟ, ಜೋಡಿ ಪತ್ತದ್ ಆಟ, ಕರು ಹಾಕುವ/ ತೆಗೆದುಕೊಳ್ಳುವ ಆಟ, ಸೀತೆ ಆಟ, ಅರಸನ ಆಟ, ಅರಸ-ಒಕ್ಕಲು ಆಟ, ಕಟ್ಟೆ ಮನೆ ಆಟ, ಮೂಲೆ ಮನೆ ಆಟ ಇತ್ಯಾದಿ. ಒಬ್ಬರೇ ಆಡುವುದಾದರೆ ಸೀತೆ ಆಟ, ಎಂದೂ ಮುಗಿಯದ ಆಟಗಳಿವೆ. ಇಬ್ಬರು ಆಡುವುದಾದರೆ ಸಾದಾ ಆಟ, ಹೆಗ್ಗೆ ಆಟ, ತಿಂಬಾಟ, ಮೂಲೆಮನೆ ಆಟ ಇತ್ಯಾದಿ. ೩ ಜನ ಆಡುವುದಾದರೆ ಅರಸ-ಒಕ್ಕಲು / ಅರಸ-ಮಂತ್ರಿ-ಜನರ ಆಟ. 

ಇದರಲ್ಲಿ ಉಪಯೋಗಿಸುವ ನುಡಿಗಟ್ಟುಗಳು ಸಹ ಅಷ್ಟೇ ವೈವಿಧ್ಯಮಯ.. ದತ್ತ ಸರಿ ಇರಬೇಕು, ಪತ್ತ ತೆಗೆದುಕೊಳ್ಳುವುದು, ಕರು ಹಾಕುವುದು, ಹೆಗ್ಗಣ ಆದ ಗೋಣಿ, ಬೀಜ ಬಿತ್ತಿ, ಬೆಳೆ ತೆಗೆದುಕೊಳ್ಳುವುದು, ಹರಳು ಹಾಕಿ ತೆಗೆದುಕೊಳ್ಳುವುದು, ಪೋಕಿಣಿ ಮಾಡುವುದು, ಸರ್ಮನೆ ಆಗುವುದು, ಕರು ಕೊಳೆಯುವುದು.

ಅಳುಗುಳಿಮನೆಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಕ್ಕಳಿಗೆ ಕೂಡುವ, ಕಳೆಯುವ, ಗುಣಿಸುವ ಮತ್ತು ಭಾಗಿಸುವ ಪರಿಕಲ್ಪನೆಯನ್ನು ಚೆನ್ನಾಗಿ ಮನದಟ್ಟು ಮಾಡಿಸಬಹುದು. ಅದಕ್ಕೆ ನಮ್ಮ ಹಿಂದಿನವರು ಮಿದುಳಿನಲ್ಲಿ ಲೆಕ್ಕ ಮಾಡುವುದರಲ್ಲಿ ಚುರುಕಿದ್ದರು.

ಪದಗಳ ಸಮಾನಾರ್ಥ:

ಮಣೆ - ೫-೭ ಗುಳಿಗಳಿರುವ ಆಟಿಕೆಯ ವಸ್ತು. ಇದು ಮರ, ಹಿತ್ತಾಳೆ, ಕಲ್ಲಿನದು ಆಗಿರಬಹುದು. ಎರಡು ಬದಿಯಲ್ಲಿ ೭ ರಂತೆ , ಒಟ್ಟು ೧೪ ಗುಳಿಗಳು ಇರುತ್ತದೆ.

ಹೆಗ್ಗ - ಹರಳು ಗುಳಿಯ ಆಟದಲ್ಲಿ ಹೆಚ್ಚು ಹರಳುಗಳಿಂದ ತುಂಬಿದ ಗುಳಿ. 

ಗುಳಿ - ಗುಂಡಿಗಳಿಗೆ ಇರುವ ಪ್ರಾದೇಶಿಕ ಹೆಸರುಗಳು. ಗುಂತಲು, ಕುಳಿ, ಗೋಟು,ಗುಣಿ , ಹಳ್ಳ  

ಪೆಗ್ಗ - ಪೆರ್ಗ ಅಂತಲೂ ಕರೆಯುತ್ತಾರೆ. ಸಂಗ್ರಹ ವಾದ ಗುಳಿಯ ಕಾಯಿಗಳು. 

ಕರು - ಆಟ ಆಡಲು ಶುರು ಮಾಡಿದ ಮೇಲೆ ಯಾವ ಗುಳಿಯಲ್ಲಿ ೪ ಕಾಯಿಗಳು ಒಟ್ಟಾದಾಗ ಕರು ಎನ್ನುತ್ತೇವೆ. ಪಶು ಎಂದು ಆಂಧ್ರ ಕಡೆ, ಪಸು ಎಂದು ತಮಿಳ್ನಾಡಿನ ಕಡೆಗೆ ಕರೆಯುತ್ತಾರೆ. ಆಟವನ್ನು  ೪ ಕಾಯಿಗಳಿಂದ ಆಡಿದ್ದರೇ, ೪ ಕಾಯಿಗಳು ಒಟ್ಟಾದಾಗ ಕರು ಬಂದಿರುತ್ತೆ. ಆಟವನ್ನು  ೫ ಕಾಯಿಗಳಿಂದ ಆಡಿದ್ದರೇ, ೪ ಕಾಯಿಗಳು ಒಟ್ಟಾದಾಗ ಕರು ಬಂದಿರುತ್ತೆ. ಆಟವನ್ನು  ೬ ಕಾಯಿಗಳಿಂದ ಆಡಿದ್ದರೇ, ೬ ಕಾಯಿಗಳು ಒಟ್ಟಾದಾಗ ಕರು ಹಾಕುತ್ತದೆ.

 

ಸಾದಾ ಆಟ 

  1. ಬಹು ಪ್ರಚಲಿತದಲ್ಲಿ ಇರುವುದು ಈ ಆಟ. 
  2. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೭೦ ಕಾಯಿಗಳು ಇರಬೇಕು.
  3. ಪ್ರತಿಯೊಂದು ಮನೆಗೆ ೫ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ. 
  4. ಆಟಗಾರ ೧ - ಅವರ ಬದಿಯ ಒಂದು ಮನೆಯಿಂದ ಅಪ್ರದಕ್ಷಿಣಕಾರವಾಗಿ ಮುಂದಿನ ಮನೆಗಳಿಗೆ ಒಂದೊಂದು ಕಾಯಿಯನ್ನು ಹಾಕುತ್ತ ಬರಬೇಕು. ಖಾಲಿಯಾದ ಮನೆಯ ಮುಂದಿನ ಮನೆಯ ಕಾಯಿಗಳನ್ನು ತೆಗೆದುಕೊಂಡು ಮತ್ತೆ  ಎಲ್ಲ ಮನೆಗಳಿಗೆ ಹಾಕುತ್ತ ಬರಬೇಕು. 
  5. ಕೈಯಲ್ಲಿ ಕಾಳು ಖಾಲಿಯಾದಾಗ, ಮುಂದಿನ ಮನೆ ಖಾಲಿ ಇದ್ದರೆ, ಅದನ್ನು ಒಮ್ಮೆ ಸವರಿ ಅದರ ಮುಂದಿನ ಮನೆಯಲ್ಲಿ ಇರುವ ಅಷ್ಟು ಕಾಳುಗಳನ್ನು ತೆಗೆದುಕೊಂಡು ಎದುರಾಳಿಗೆ ಆಟವನ್ನು ಬಿಟ್ಟು ಕೊಡಬೇಕು. 
  6. ಒಮ್ಮೆ, ಕೈಯಲ್ಲಿಕಾಳು ಖಾಲಿಯಾಗಿದ್ದು, ಮುಂದಿನ ಮನೆ ಖಾಲಿ ಇದ್ದು, ಅದರ ಮುಂದಿನ ಮನೆನೂ ಖಾಲಿ ಇದ್ದಾರೆ ಆಟಗಾರನಿಗೆ ಯಾವ ಪತ್ತವೂ ಸಿಗುವುದಿಲ್ಲ. 
  7.  ಎದುರಾಳಿ ಆಟಗಾರನು ೩, ೪, ೫ ರಂತೆಯೇ ಆಟ ಆಡುವುದು. 
  8. ಒಟ್ಟಿನಲ್ಲಿ ಆಟ ಮುಗಿಯುವುದು ಯಾವಾಗ ಅಂದ್ರೆ, ಯಾವುದಾದರೂ ಒಂದು ಬದಿಯಲ್ಲಿ ಕಾಳುಗಳು ಖಾಲಿಯಾಗಬೇಕು. ಅಥವಾ ಒಂಟಿ ಮನೆಯಲ್ಲಿ ಕಾಯಿಗಳು ಇರಬೇಕು. 
  9. ಈಗ ಮತ್ತೆ ಅವರ ಹತ್ತಿರ ಇರುವ ಕಾಳುಗಳನ್ನು ಒಂದು ಕಡೆಯಿಂದ ೫-೫ ಕಾಯಿಗಳಂತೆ ಹಂಚಬೇಕು. ಒಬ್ಬ ಆಟಗಾರನ ಹತ್ತಿರ ಕೇವಲ ೫ ಮನೆಗಳಿಗೆ ಹಾಕುವಷ್ಟು ಮಾತ್ರ ಕಾಯಿಗಳು ಇದ್ದರೆ, ಎದುರಾಳಿಯು ಕೂಡ ಅಷ್ಟೇ ಮನೆಗೆ ಕಾಯಿ ಹಾಕಬೇಕು. ಉಳಿದ ಕಾಯಿಗಳನ್ನು ತನ್ನ ಹತ್ತಿರವೇ ಇಟ್ಟುಕೊಂಡಿರಬೇಕು.  ಉದಾ: ಒಂದು ಸುತ್ತು ಸಾದಾ ಆಟ ಆದ ಮೇಲೆ, ಆಟಗಾರ ೧ ಹತ್ತಿರ ೨೬ ಕಾಯಿಗಳು, ಆಟಗಾರ ೨ ಹತ್ತಿರ ೪೪ ಕಾಯಿಗಳು ಇದೆ ಅಂತ ಇಟ್ಟುಕೊಳ್ಳೋಣ. ಆಟಗಾರ೧ ಕೇವಲ ೫ ಮನೆಗಳಿಗೆ ೫ ರಂತೆ ಕಾಯಿಗಳನ್ನು ಹಾಕಿ, ಒಂದು ಕಾಯಿ ತನ್ನ ಹತ್ತಿರ ಇಟ್ಟು ಕೊಂಡಿರುತ್ತಾನೆ. ಆಟಗಾರ೨ ಕೂಡ ೫ ಮನೆಗಳಿಗೆ ೫ ರಂತೆ ಕಾಯಿಗಳನ್ನು ಹಾಕಿ, ಉಳಿದ ೧೯ ಕಾಯಿಗಳನ್ನ   ತನ್ನ ಹತ್ತಿರ ಇಟ್ಟು ಕೊಂಡಿರುತ್ತಾನೆ. 
  10. ಈಗ ಗೆದ್ದವರು ಈಗ ಆಟ ಮತ್ತೆ ೩,೪,೫ ರಂತೆಯೇ ಆಡುವುದು, ಆಟ ಮುಗಿಯುವ ತನಕ. 
  11. ಹೀಗೆಯೇ ಸುಮಾರು ಸಲ ಆಡುತ್ತಾ ಎಲ್ಲ ಕಾಯಿಗಳು ಒಬ್ಬರ ಹತ್ತಿರ ಬರಬೇಕು. ಅವರು ಗೆದ್ದಂತೆ!
  12. ಆಟ ಒಮ್ಮೊಮ್ಮೆ ೫-೧೦ ನಿಮಿಷದಲ್ಲಿ ಮುಗಿಯುವುದು ಇದೆ. ಕೆಲವೊಮ್ಮೆ ಗಂಟೆಗಟ್ಟಲೆ ಎಳೆಯುವುದು ಇದೆ. 

ಗಮನಿಸಿ:     ಈ ಆಟವನ್ನು ಉತ್ತರ ಕರ್ನಾಟಕದಲ್ಲಿ ೪ ಕಾಯಿಗಳೊಂದಿಗೆ, ಮೈಸೂರು, ದಕ್ಷಿಣ ಕನ್ನಡ ಮತ್ತು ಕರಾವಳಿ                   ಪ್ರದೇಶದಲ್ಲಿ ೫ ಕಾಯಿಗಳೊಂದಿಗೆ, ತಮಿಳ್ನಾಡು ಆಂಧ್ರದ ಕಡೆ ೬ ಕಾಯಿಗಳೊಂದಿಗೆ ಆಡುವುದು                           ಬಳಕೆಯಲ್ಲಿ ಇದೆ. 

ಕರು ಬಾಚುವ ಆಟ 

  1. ಈ ಆಟವನ್ನು ಕರು ತೆಗೆದುಕೊಳ್ಳುವ, ಕರು ಬರುವ ಆಟ ಎಂದೆಲ್ಲ ಕರೆಯುತ್ತಾರೆ. ಕೆಲಕಡೆ  ಎಮ್ಮೆ ಇಯೋದು ಅಂತ ಕರೆಯುತ್ತಾರೆ.
  2. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೫೬ ಕಾಯಿಗಳು ಇರಬೇಕು.
  3. ಪ್ರತಿಯೊಂದು ಮನೆಗೆ ೪ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ.
  4. ಆಟಗಾರ ೧ ಯಾವುದಾದರೊಂದು  ಮನೆಯಿಂದ ಕಾಳುಗಳನ್ನು ತೆಗೆದು ಒಂದೊಂದೇ ಕಾಳುಗಳನ್ನು ಒಂದು ಮನೆಯೊಳಗೆ ಹಾಕುತ್ತ ಅಪ್ರದಕ್ಷಿಣವಾಗಿ ಸಾಗಬೇಕು. 
  5. ಯಾವ ಮನೆಯಲ್ಲಿ ಕೈಯಲ್ಲಿರುವ ಕಾಲುಗಳು ಮುಗಿಯುತ್ತದೆಯೋ, ಆ ಮನೆಯ ಕಾಳುಗಳನ್ನು ತೆಗೆದು ಆಡುತ್ತ ಹೋಗಬೇಕು.  (ಗಮನಿಸಿ ಸಾದಾ ಆಟದಲ್ಲಿ ಮುಂದಿನ ಮನೆಯ ಕಾಲುಗಳನ್ನು ತೆಗೆದು ಹಂಚುತ್ತೇವೆ. )
  6. ಆಟ ಆಡುತ್ತಿರವಾಗ, ಯಾವುದಾದರೂ ಮನೆಯಲ್ಲಿ ೪ ಕಾಳುಗಳು ಆದ್ರೆ , ಆಟಗಾರ ತೆಗೆದು ಕೊಲ್ಲುತ್ತಾನೆ. 
  7. ಕರು ಯಾವ ಬದಿಯಲ್ಲೂ ಆದರೂ, ಆಡುತ್ತಿರುವ ಆಟಗಾರ ತೆಗೆದುಕೊಳ್ಳಬಹುದು. 
  8. ಸನ್ನಿವೇಶ ೧: ಆಡುವಾಗ ಕೈಯಲ್ಲಿ ಒಂದು ಕಾಳಿರಬಹುದು, ಮುಂದಿನ ಮನೆ ಖಾಲಿಯಿರಬಹುದು. ಆಗ ಖಾಲಿ ಮನೆಯಲ್ಲಿ ಕಾಳು ಹಾಕಿ , ಎದುರಾಳಿಗೆ ಆಟ ಬಿಟ್ಟು ಕೊಡಬೇಕು.
  9. ಸನ್ನಿವೇಶ ೨: ಕೈಯಲ್ಲಿ ಒಂದು ಕಾಳಿದೆ, ಮುಂದಿನ ಮನೆಯಲ್ಲಿ ೩ ಕಾಯಿಗಳು ಇದೆ. ಅದರ ಮುಂದಿನ ಮನೆ ಖಾಲಿ ಇದೆ ಎಂದು ಕೊಳ್ಳಿ . ಆಗ ಕಾಳನ್ನು ಮುಂದಿನ ಮನೆಗೆ ಹಾಕಿದಾಗ ಕರು ಹುಟ್ಟುತ್ತದೆ. ಆ ಕರುವನ್ನು ಎತ್ತಿಕೊಂಡು ಎದುರಾಳಿಗೆ ಆಟವನ್ನು  ಬಿಡಬೇಕು.
  10. ಆಟ ಆಡುವ ಅವಸರದಲ್ಲಿ ಕರು ಎತ್ತಿಕೊಳ್ಳುವುದು ಮರೆತರೆ ಅಥವಾ ಇನ್ನೊಂದು ಕಾಯಿ ಹಾಕಿಬಿಟ್ಟರೆ, ಕಾರು ಕೊಳೆತು ಹೋಗುತ್ತದೆ. ಇದನ್ನು ಯಾರು ತೆಗೆದುಕೊಳ್ಳಲು ಬರುವುದಿಲ್ಲ. ಇದನ್ನು ಕರು ಕೊಳೆಯುವುದು ಎನ್ನುತ್ತಾರೆ.
  11. ಎದುರಾಳಿ ಆಟಗಾರನು ಕರು ಆಗಿದ್ದು ನೋಡಿ ಸುಮ್ಮನಿರುವನು. (ಅವನಿಗೆ ಮತ್ತಷ್ಟು ಕಾಯಿಗಳನ್ನು ಬಾಚಿಕೊಳ್ಳಲು ಒಂದು ಅವಕಾಶ ಅಲ್ಲವೇ. )
  12. ಆಟದ ಸುತ್ತು ಮುಗಿದ ಮೇಲೆ, ಎಲ್ಲ ಕರು ಕಾಯಿಗಳನ್ನು ಅವರ ಅವರ ಮನೆಗೆ ತುಂಬುವರು. ಕಮ್ಮಿ ಕರು ಕಾಯಿಗಳ ಪಡೆದವರ ಬದಿಯಲ್ಲಿ ಕೆಲ ಮನೆಗಳು ಖಾಲಿ ಹಾಗೆಯೇ ಇರುತ್ತದೆ. ಆಟಕ್ಕೆ ಉಪಯೋಗಿಸುವಂತೆ ಇಲ್ಲ. ಉದಾ: ಆಟಗಾರ ೧ ಹತ್ತಿರ ೧೯ಕಾಳುಗಳು ಇರುವುದು. ಆಟಗಾರ ೨ ಹತ್ತಿರ ೩೭ ಕಾಲುಗಳು ಇರುವುದು. ಆಟಗಾರ ೧ ಬದಿಯಲ್ಲಿ ೪ ಮನೆಗಳಿಗೆ ಮಾತ್ರ ಕಾಳುಗಳನ್ನು ಹಂಚಲು ಆಗವುದು. ಆಟಗಾರ ೨ ಬದಿಯಲ್ಲಿ ೭ ಮನೆಗೆ ಕಾಲುಗಳನ್ನು ಹಂಚುತ್ತಾನೆ.  ಒಟ್ಟು ೧೪ ಗುಳಿಗಳಲ್ಲಿ ಕೇವಲ ೧೧ ಗುಳಿಗಳಲ್ಲಿ ಆಟ ಆಡಬೇಕು. 
  13. ಆಟ ಮತ್ತೆ ೪-೧೨ ರಂತೆಯೇ ಮುಂದುವರಿಸಬೇಕು.
  14. ಒಮ್ಮೆ ಮುಂದಿನ ಸುತ್ತಿನಲ್ಲಿ ಹೆಚ್ಚು ಕರು ಪಡೆದರೆ,ಬಿಟ್ಟ ಗುಳಿಗಳನ್ನು ಸೇರಿಸಿ ಆಡಬಹುದು. 
  15. ಹೆಚ್ಚು ಕರು ಪಡೆದವರು ಗೆದ್ದಂತೆ. 

ಹೆಗ್ಗೆ ಆಟ 

  1.  ಈ ಆಟವನ್ನು  ಹೆಗ್ಗೆ ಆಟ / ಪೆಗ್ಗದ ಆಟ ಸಹ ಕರೆಯುತ್ತಾರೆ. ಪೆಗ್ಗ ಅಂದ್ರೆ ನಿಧಿ, ರಾಶಿ ಅಂತ ತುಳು ಭಾಷೆಯಲ್ಲಿ ಹೇಳುತ್ತಾರೆ. ಆದ್ದರಿಂದ ಇಲ್ಲಿ ಕಾಯಿಗಳ ರಾಶಿಯೇ ನಮಗೆ ನಿಧಿ i.e. ಹೆಗ್ಗೆ, ಪೆಗ್ಗ. 
  2. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೫೬ ಕಾಯಿಗಳು ಇರಬೇಕು.
  3. ಪ್ರತಿಯೊಂದು ಮನೆಗೆ ೪ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ.
  4. ಆಟಗಾರ ೧ ಯಾವುದಾದರೊಂದು  ಮನೆಯಿಂದ ಕಾಳುಗಳನ್ನು ತೆಗೆದು ಒಂದೊಂದೇ ಕಾಳುಗಳನ್ನು ಒಂದು ಮನೆಯೊಳಗೆ ಹಾಕುತ್ತ ಅಪ್ರದಕ್ಷಿಣವಾಗಿ ಸಾಗಬೇಕು.
  5. ಕಾಳುಗಳು ಹಾಕಿ, ಮುಗಿದ ಮುಂದಿನ ಮನೆಯಿಂದ ಕಾಳುಗಳನ್ನು ತೆಗೆದು ಮತ್ತೆ ಹಂಚುತ್ತಾ ಹೋಗಬೇಕು. 
  6. ಕೊನೆಯ ಕಾಳನ್ನು ಹಂಚಿ, ಮುಂದಿನ ಗುಳಿ ಖಾಲಿ ಇದ್ದರೆ, ಆದರೆ ಮುಂದಿನ ಗುಳಿಯಲ್ಲಿರುವ ಕಾಯಿಗಳನ್ನು   ಆಡುತ್ತಿದ್ದವರು ತೆಗೆದುಕೊಳ್ಳಬೇಕು. ಇದಕ್ಕೆ ಪೆತ್ತ/ಹೆಗ್ಗ/ಪಂತ/ಪಣತ ತೆಗೆದುಕೊಳ್ಳುವುದು ಅಂತ ಹೇಳುತ್ತಾರೆ. 
  7. ಆಟ ಆಡುವಾಗ, ಆಟಗಾರರು ಅವರವರ ಬದಿಯಲ್ಲಿ ಆಗುವ ಕರುಗಳನ್ನು ತೆಗೆದು ಕೊಳ್ಳಬಹುದು.
  8. ಯಾರೇ ಆಟ ಆಡುತ್ತಿರಲಿ, ಕರುಗಳು ಆ ಬದಿಯ ಆಟಗಾರರಿಗೆ ಸೇರಿದ್ದು. ಕರು ಕೊಳೆಯುವ ಮುಂಚೆ ತೆಗೆದುಕೊಳ್ಳಬೇಕು. 
  9. ಹೀಗೆ ಆಟ ಮುಗಿಯುವ ತನಕ ಆಡಬೇಕು. ಅಂದ್ರೆ, ಯಾವುದಾದರೂ ಒಂದು ಬದಿಯಲ್ಲಿ ಕಾಳುಗಳು ಖಾಲಿಯಾಗಬೇಕು, ಎದುರಾಳಿಗೆ ಆಟ ಆಡಲು ಗುಳಿಗಳೇ ಇರುವುದಿಲ್ಲ ಅಥವಾ ಒಂದೇ ಗುಳಿಯಲ್ಲಿ ಕಾಯಿಗಳು ಇರಬೇಕು.         

    ಜೋಡಿ ಹೆಗ್ಗೆ ಆಟ 

  1.  ಈ ಆಟವನ್ನು  ಜೋಡಿ ಹೆಗ್ಗೆ ಆಟ/ ಜೋಡಿ ಪೆಗ್ಗದ/ ಜೋಡಿ ಪೆರ್ಗ ಆಟ/ ಜೋಡಿ ಮನೆ ಆಟ ಅಂತಲೂ ಕರೆಯುತ್ತಾರೆ. ಆಡುವ ವಿಧಾನ ಹೆಗ್ಗೆ ಆಟದಂತೆಯೇ. ಖಾಲಿ ಮನೆಯ ಮುಂದಿನ ಮತ್ತು ಎದರು ಮನೆಯ ಕಾಯಿಗಳನ್ನು ಪೂರ್ತಿ ತೆಗೆದು ಇಟ್ಟುಕೊಳ್ಳಬೇಕು. 
  2. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೫೬ ಕಾಯಿಗಳು ಇರಬೇಕು.
  3. ಪ್ರತಿಯೊಂದು ಮನೆಗೆ ೪ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ.
  4. ಆಟಗಾರ ೧ ಯಾವುದಾದರೊಂದು  ಮನೆಯಿಂದ ಕಾಳುಗಳನ್ನು ತೆಗೆದು ಒಂದೊಂದೇ ಕಾಳುಗಳನ್ನು ಒಂದು ಮನೆಯೊಳಗೆ ಹಾಕುತ್ತ ಅಪ್ರದಕ್ಷಿಣವಾಗಿ ಸಾಗಬೇಕು.
  5. ಕಾಳುಗಳು ಹಾಕಿ, ಮುಗಿದ ಮುಂದಿನ ಮನೆಯಿಂದ ಕಾಳುಗಳನ್ನು ತೆಗೆದು ಮತ್ತೆ ಹಂಚುತ್ತಾ ಹೋಗಬೇಕು. 
  6. ಕೊನೆಯ ಕಾಳನ್ನು ಹಂಚಿ, ಮುಂದಿನ ಗುಳಿ ಖಾಲಿ ಇದ್ದರೆ, ಆದರೆ ಮುಂದಿನ ಗುಳಿಯಲ್ಲಿರುವ ಕಾಯಿಗಳನ್ನು ಮತ್ತು ಮೇಲೆಇನ ಮನೆಯಲ್ಲಿರುವ ಕಾಯಿಗಳನ್ನು ಆಡುತ್ತಿದ್ದವರು ತೆಗೆದುಕೊಳ್ಳಬೇಕು. ಇದಕ್ಕೆ  ಜೋಡಿ ಪೆತ್ತ/ಹೆಗ್ಗ/ಪಂತ/ಪಣತ ತೆಗೆದುಕೊಳ್ಳುವುದು ಅಂತ ಹೇಳುತ್ತಾರೆ. 
  7. ಆಟ ಆಡುವಾಗ, ಆಟಗಾರರು ಅವರವರ ಬದಿಯಲ್ಲಿ ಆಗುವ ಕರುಗಳನ್ನು ತೆಗೆದು ಕೊಳ್ಳಬಹುದು.
  8. ಯಾರೇ ಆಟ ಆಡುತ್ತಿರಲಿ, ಕರುಗಳು ಆ ಬದಿಯ ಆಟಗಾರರಿಗೆ ಸೇರಿದ್ದು. ಕರು ಕೊಳೆಯುವ ಮುಂಚೆ ತೆಗೆದುಕೊಳ್ಳಬೇಕು. 
  9. ಹೀಗೆ ಆಟ ಮುಗಿಯುವ ತನಕ ಆಡಬೇಕು. ಅಂದ್ರೆ, ಯಾವುದಾದರೂ ಒಂದು ಬದಿಯಲ್ಲಿ ಕಾಳುಗಳು ಖಾಲಿಯಾಗಬೇಕು, ಎದುರಾಳಿಗೆ ಆಟ ಆಡಲು ಗುಳಿಗಳೇ ಇರುವುದಿಲ್ಲ ಅಥವಾ ಒಂದೇ ಗುಳಿಯಲ್ಲಿ ಕಾಯಿಗಳು ಇರಬೇಕು.

ಬಂದಿ  ಆಟ 

ಒಂದು ಮನೆಯಲ್ಲಿ ಹೆಚ್ಚು ಹೆಚ್ಚು ಕಾಯಿಗಳನ್ನು ಸೇರಿಸುವ ಆಟ. 

ಅಜ್ಜಿ ಆಟ 

  1. ಇದನ್ನು ಎಂದೂ ಮುಗಿಯದ ಆಟ, ಅಜ್ಜಿ ಮುಗ್ಗರಿಸದ ಆಟ, ಸೀತೆ ಆಟ ಅಂತಲೂ ಕರೆಯುತ್ತಾರೆ. ಸೀತೆಯು ಅಶೋಕವನದಲ್ಲಿ ಇದ್ದಾಗ , ಬೇಸರ ಕಳೆಯಲು ಈ ಆಟವನ್ನು ಆಡುತಿದ್ದಳು ಅನ್ನುವ ಪ್ರತೀತಿ ಇದೆ.
  2. ಈ ಆಟವನ್ನು ಯಾರು ಜೊತೆಯಿಲ್ಲ, ಒಬ್ಬರೇ ಆಡಬೇಕುಅಂದಾಗ ಮಾತ್ರ. 
  3. ೭ ಗುಣಿಯ ಮನೆಗೆ ೯ ಕಾಯಿಗಳು ಇರಬೇಕು. 
  4. ಇಲ್ಲಿ ಕಾಳುಗಳನ್ನು 2,1,0,1,0,1,0,1,0,1,0,1 ರೀತಿಯಲ್ಲಿ ಹಂಚಬೇಕು.
  5. ಶುರುವಿನಲ್ಲಿ ೨ ಕಾಯಿಗಳು ಇರುವ ಮನೆಯಿಂದ ತೆಗೆದು ಹಂಚುತ್ತಾ ಹೋಗಬೇಕು. 
  6. ಕೈಯಲ್ಲಿ ಹರಳು ಮುಗಿದ ತಕ್ಷಣ ಮುಂದಿನ ಮನೆಯಿಂದ ತೆಗೆದು ಹಂಚಬೇಕು. 
  7. ಈ ಆಟದಲ್ಲಿ ಎಲ್ಲೂ ನಮಗೆ ಖಾಲಿ ಮನೆ ಸಿಗುವುದಿಲ್ಲ.

ಸೀತೆ ಆಟ

  1. ಇದನ್ನು ಬಹುವಾಗಿ ಸೀತೆಯ ಆಟ ಅಂತ ಗುರುತಿಸುವುದು. ಸೀತೆಯು ಲಂಕೆಯ ಅಶೋಕವನದಲ್ಲಿ ಇದ್ದಾಗ , ಬೇಸರ ಕಳೆಯಲು, ರಾಮನನ್ನು ನೆನೆಯಲು ಈ ಆಟವನ್ನು ಆಡುತಿದ್ದಳು ಅನ್ನುವ ಪ್ರತೀತಿ ಇದೆ. 
  2.  ಒಬ್ಬರು ಸಾಕು ಆಡಲು. 
  3. ಒಂದು ಬದಿಯಲ್ಲಿ ಒಂದೊಂದು ಮನೆಗೆ ಕ್ರಮವಾಗಿ 7,6,5,4,3,2,1 ಕಾಯಿಗಳನ್ನು ಎಡದಿಂದ ಬಲಕ್ಕೆ ಹಾಕುತ್ತ ಬರಬೇಕು. ಮತ್ತೆ 7,6,5,4,3,2,1 ಕಾಯಿಗಳನ್ನ ಹಾಕುತ್ತ ಬರಬೇಕು. ಇಲ್ಲಿಗೆ ಆಟಕ್ಕೆ ಸಿದ್ಧತೆ ಮಾಡಿಕೊಂಡಂತೆ. 
  4. ಯಾವದಾದರೂ ಒಂದು ಮನೆಯಿಂದ ಕಾಯಿಗಳನ್ನು ಎತ್ತಿಕೊಂಡು ಮುಂದಿನ ಮನೆಗಳಿಗೆ ಹಂಚುತ್ತಾ ಹೋಗಬೇಕು. ಯಾವ ಮನೆಯಲ್ಲಿ ಕಾಳು ಖಾಲಿ ಆಗುತ್ತೋ, ಅದರ ಮುಂದಿನ ಮನೆಯಿಂದ ಕಾಳುಗಳನ್ನು ಎತ್ತಿ ಮತ್ತೆ ಹಂಚುತ್ತಾ ಹೋಗಬೇಕು. 
  5. ಈ ಆಟದಲ್ಲಿ ನಮಗೆ ಯಾವಾಗಲೂ ಕಾಳುಗಳು ದೊರೆಯುತ್ತಲೇ ಇರುತ್ತದೆ. ಅದೆಷ್ಟೋ ಸುತ್ತುಗಳು ಆದ ಮೇಲೆ ಕಾಳುಗಳು ತಮ್ಮ ತಮ್ಮ ಪ್ರಾಂಭದ ಮನೆಗೆ ಸೇರುತ್ತದೆ. 
  6. ಈ ಆಟದಲ್ಲಿ ಎಲ್ಲೂ ನಮಗೆ ಖಾಲಿ ಮನೆ ಸಿಗುವುದಿಲ್ಲ. 
    ಹಾಗೆ ಸುಮ್ಮನೆ ಒಂದು ಪಂಥ: ಎಷ್ಟು ಸುತ್ತು ಆದ ಮೇಲೆ ಮೊದಲ ಮನೆಗೆ ಕಾಲುಗಳು ಬರುತ್ತದೆ. ಇದು ಗಣಿತದ            ಯಾವ ಅಂಶವನ್ನು ತೋರಿಸುತ್ತದೆ ?
 
 

 

Sunday, October 13, 2019

ತುಣುಕು~ಮಿಣುಕು


ತುಣುಕು~ಮಿಣುಕು

ನಾನು ಕಥಾಗುಚ್ಛದ ಓದುಗರಲ್ಲಿ ಒಬ್ಬಳು. ಇವತ್ತಿನ 'ತುಣುಕು~ಮಿಣುಕು' ಬರಹ ನನ್ನಲ್ಲಿ ನಗೆ ಬುಗ್ಗೆಯನ್ನೇ ಹುಟ್ಟಿಹಾಕಿದೆ. ಪ್ರೇರಿತಳಾಗಿ ನಾನು ಬರೆದಿರುವೆ.
ನಮ್ಮ ಅಮ್ಮ ಮನೆಯಲ್ಲಿ ಚಪ್ಪರದವರೆಕಾಯಿ ಬಳ್ಳಿ ಹಬ್ಬಿಸಿದ್ದರು. ಮೊದ-ಮೊದಲು ಕಾಯಿ ಕೀಳಲು, ಹಚ್ಚಿಕೊಡಲು ಬಲು ಉತ್ಸಾಹ.. ನಾನು ನನ್ನ ತಮ್ಮ ನಾ ಮೊದಲು ನಾ ಮೊದಲು ಅಂತ ಗಲಾಟೆ ಮಾಡಿ ಕೇಳ್ತಾ ಇದ್ದ್ವಿ. ಈ ಉತ್ಸಾಹ ಬಲು ದಿನ ಇರಲಿಲ್ಲ. ಅಮ್ಮ ಮೂರು ಹೊತ್ತು ಚಪ್ಪರದವರೆಯ ಉತ್ತರ ಕರ್ನಾಟಕ ತರಹ ಪಲ್ಯ, ಕೂಟು, ಹುಳಿ, ನಾರ್ಥ್-ಇಂಡಿಯನ್ ಕರಿ ಅಂತ ತರಾವರಿ ಮಾಡ್ತಾ ಇದ್ದರು. ನಮಗೋ ಸಾಕಾಗಿ ಹೋಗಿತ್ತು. ಅಮ್ಮ ಅವತ್ತು ಸಾಯಂಕಾಲ ಅವರ ಗೆಳತಿಗೆ ಮನೆಯಲ್ಲಿ ಬೆಳೆದ ಚಪ್ಪದವರೇ ತೊಗೊಳ್ಳಿ ಅಂತ ಕೊಟ್ಟರು. ಹೊಳೀತು ನೋಡಿ ನಮಗೆ ಭಯಂಕರ ಐಡಿಯಾ! ದಿನಾ ಸಾಯಂಕಾಲ ಟೆರೇಸ್ ಮೇಲೆ ಹೋಗು ಮನೆ ಮುಂದೆ ಯಾರೇ ಸ್ವಲ್ಪ ಗುರುತಿರುವರು ಹೋಗ್ತಾ ಇದ್ದರು... ಆಂಟಿ ಹೇಗಿದ್ದೀರಾ? ಮನೆಗೆ ಬಂದು ತುಂಬಾ ದಿನ ಆಗಿದೆ. ಅಮ್ಮ ಇದ್ದಾರೆ ಬನ್ನಿ ಅಂತ ಬಲವಂತ ಮಾಡಿ ಕರೆದುಕೊಂಡು ಬರ್ತಾ ಇದ್ವಿ. ಆಮೇಲೆ ಮೇಲೆ ಬೆಳೆದ ತರಕಾರಿ ತೊಗೊಳ್ಳಿ ಅಂತ ಒಂದು ಕವರ್ ನಾವೇ ಕೊಡ್ತಾ ಇದ್ವಿ. ಅಮ್ಮನಿಗೆ ಹೀಗೂ ಮನೆಯಲ್ಲಿ ತುಂಬಾ ಇದೆಯಲ್ಲವೆ ಅಂತ ಹೇಳ್ತಾ ಇದ್ವಿ. ೨-೩ ದಿನ ಅಮ್ಮನಿಗೆ ಗೊತ್ತಾಗಲಿಲ್ಲ.. ೪ ನೇ ದಿನ ಒಟ್ಟಿಗೆ ಇಬ್ಬರಿಬ್ಬರು ಆಂಟಿನ ಕರೆದುಕೊಂಡು ಬಂದೆ. ಅವರಿಗೆ ಕೊಟ್ಟು ಕಳಿಸ್ತಾ ಇರಬೇಕಾದ್ರೆ ನಂ ತಮ್ಮ ಇನ್ನೊಬ್ಬ ಆಂಟಿನ ಕರೆದುಕೊಂಡು ಬಂಡ.. ಇವರಿಗೂ ಒಂದು ಕವರ್ ಕೊಡೆ ಅಕ್ಕ ಅಂತ ಹೇಳಿದ. ಅಷ್ಟು ಹೊತ್ತಿಗೆ ಅಮ್ಮನಿಗೆ ಗೊತ್ತಾಯಿತು. ಆಮೇಲೆ ಇತ್ತು ನಮಗೆ ಒಳ್ಳೆ ಕ್ಲಾಸ್ :-)

ಈಗಲೂ ನೆನಸಿಕೊಂಡರೆ, ಅಮ್ಮ ಮನೆಯಲ್ಲಿ ಚಪ್ಪರದವರೇ ಬೆಳೆಸಬೇಡ ಅಂತ ಹೇಳ್ತಿವಿ.

Thursday, September 26, 2019

ಮಕ್ಕಳಿಗೆ ಆಟಗಳು ಬೇಕೇ?

ಮಕ್ಕಳಿಗೆ ಆಟಗಳು ಬೇಕೇ?
====================
ಬೇಕು.. ಖಂಡಿತ ಬೇಕು ಅಂತ ಎಲ್ಲರೂ ಹೇಳ್ತಾರೆ. ವಾಸ್ತವಿಕವಾಗಿ ಮಕ್ಕಳನ್ನ ಆಡೋಕ್ಕೆ ಬಿಡ್ತೀವಾ ತಂದೆ ತಾಯಿಯರು? ಸುಮ್ಮನೆ ಒಂದಿಬ್ಬರು ತಂದೆ ತಾಯಿಯರನ್ನ ಕೇಳಿ.. ಒಬ್ಬೊಬರದು ಒಂದೊಂದು ಕಾರಣ...
ಹೊರಗಡೇ ಆಟ ಆಡೋದು ಸಾಧ್ಯವೇ ಇಲ್ಲ! ಕಾಲ ಸರಿಯಿಲ್ಲ, ವಾಹನಗಳು   ಚಲಿಸುತ್ತಿರುತ್ತದೆ, ಜನಾನ ನಂಬೋಕ್ಕೆ ಆಗೋಲ್ಲ, ಆ ಮಕ್ಕಳು ಸ್ವಲ್ಪ dull, ಈ ಮಕ್ಕಳು ತುಂಬಾ ಜೋರು, ಮಗದೊಬ್ಬರು ನನ್ ಮಗುಗೆ ಚಾನ್ಸೆ  ಕೊಡೋಲ್ಲ, ಮತ್ತೊಂದು ಮಗು ನನ್ ಮಗುನ ಸೇರಿಸಿಕೊಳ್ಳೊಲ್ಲ! ನಂಗೆ ಆಫೀಸ್ ಕೆಲಸ, ಮನೆ ಕೆಲಸನೇ ಸಾಕಾಗಿದೆ.. ಇನ್ನು ಆಟಕ್ಕೆ ಎಲ್ಲಿ ಕರೆದುಕೊಂಡು ಹೋಗೋದು? ಟೈಮೇ ಇಲ್ಲ, ನಂಗಂತೂ ಆಗಲ್ಲಪ್ಪ. ಹೀಗೆ ನೂರೆಂಟು ಕಾರಣಗಳು. ಈಗಂತೂ ಪಟ್ಟಣಗಳಲ್ಲಿ ಅಂದಾಜಿನ ಮಟ್ಟಿಗೆ ಶೇ ೬೦% ಪೋಷಕರ ಕತೆ ಇದೇ ಆಗಿರುತ್ತದೆ.

ಇನ್ನು ಮನೆ ಒಳಗಡೆ ಆಟಕ್ಕೆ ಬಿಟ್ಟರು ಅಂದ್ರೆ, ಅದು ಒಂದೇ ಆಡಬೇಕು! ಇನ್ನೊಂದು ಮಗು ಇದ್ರೆ ಸ್ವಲ್ಪ ಪರವಾಗಿಲ್ಲ. ಮಕ್ಕಳಿಗೆ ಇರುವ ಸಾಮಾನುಗಳನ್ನ ಹಂಚಿಕೊಳ್ಳಬೇಕು, ಜೋಪಾನವಾಗಿ ಉಪಯೋಗಿಸಬೇಕು ಅಂತ ಹೇಳಿಕೊಡವ ಗೋಜಿಗೆ ಹೋಗೋದಿಲ್ಲ. ಮಕ್ಕಳು ಕಿತ್ತಾಡ್ತಾರೆ ಅಂತ, ಮಕ್ಕಳಲ್ಲಿ ಗಲಾಟೆ ಬೇಡ ಅಂತ ಇಬ್ಬರಿಗೂ ಒಂದೇ ತರಹದ ಆಟದ ಸಾಮಾನು ಕೊಡುಸ್ತಾರೆ. ಮಕ್ಕಳ ಮೇಲೆ ಇದರ ಪರಿಣಾಮ ಏನು? ಅನ್ನುವ ದೂರದೃಷ್ಟಿ ಇರೋಲ್ಲ. ಅವರಿಗೆ ಆ ಕ್ಷಣದ  ಸಮಸ್ಯೆ ಪರಿಹಾರ ಆಯ್ತಲ್ಲ ಇವತ್ತಿನ ಅಳು ಗಲಾಟೆ ಮುಗೀತಲ್ಲ ಇಷ್ಟು ಸಾಕಪ್ಪ ಅನ್ನಿಸಿರುತ್ಥೆ. ಇನ್ನು ಮರುದಿನ ಶಾಲೆಗೇ ಕಳಿಸಲು ಬೇಕಾಗುವ ತಯಾರಿ, ಆಫೀಸಿಗೆ ಹೋಗುವ ಧಾವಂತ!
ಈ ಮಕ್ಕಳ ಗಲಾಟೆ ತಡೆಯೋಕ್ಕೆ ಆಗಲ್ಲ, ನಾವುಗಳು ಕೆಲಸ ಮಾಡೋದು ಹೇಗೆ ಅಂತ ಮೊಬೈಲ್ ನಲ್ಲಿ ಏನೋ ಹಾಕಿಕೊಡ್ತಾರೆ. ಒಮ್ಮೆ ಮಕ್ಕಳಿಗೆ ಮೊಬೈಲ್ ಎಂಬ ಮಾಯಾಮೃಗದ ರುಚಿ ಹತ್ತಿದರೆ ಬಿಡುವರೇ? ಅದರ ಮುಂದೆ ಪ್ರತಿಷ್ಟಾಪನೆ ಆದ್ರೆ ಮುಗಿದು ಹೋಯಿತು. ಅವರಿಗೆ ಜನರ ಸಾಮೀಪ್ಯ, ಆತ್ಮೀಯತೆ, ಮಾತು ಎಲ್ಲವೂ ಬೇಡೆನಿಸುತ್ತದೆ. ಇನ್ನೊಬರ  ಕಷ್ಟ, ಸುಖಗಳಿಗೆ ಸ್ಪಂದಿಸಲು ಮನಸಿಲ್ಲ! ಸದಾ ಮೊಬೈಲ್ ಅದರಲ್ಲಿ ಬರುವ ಕಾರ್ಟೂನ್, ವಿಡಿಯೋ, ಹಾಡು, Tik -Tok, challenge, game ಎಲ್ಲವು ಅಪ್ಯಾಯಮಾನ! ಅಲ್ಲಿ ಏನಾದರು ಆದರೆ ಅಳು, ದುಃಖ ಎಲ್ಲವು ಬರುತ್ತದೆ.  ನಿಜ ಜೀವನದಲ್ಲಿ ಬೇರೆಯವರಿಗೆ ಏನಾದರೂ ಆದ್ರೆ ಹೇಗೆ ಸ್ಪಂದಿಸಬೇಕು ಅಂತ ಗೊತ್ತಿರಲ್ಲ. ಅದು ನನ್ನದಲ್ಲ, ನಮಗಾಗಿಲ್ಲವಲ್ಲ ಅನ್ನುವ ತಟಸ್ಥ ಮನೋಭಾವ. ಈ  ಮಕ್ಕಳಿಗೆ ಏನಾದರು ಘಟನೆ, ಸಂಗತಿ, ಅನುಭವ, ಸಂತೋಷ, ದುಃಖ ಆದ್ರೆ ಹೇಗೆ ಹಂಚಿಕೊಳ್ಳಬೇಕು ಅಂತ ತಿಳಿದಿರೋಲ್ಲ. ಒಂಥರಾ ಒಂಟಿಯಾಗಿ ಬಿಡುತ್ತಾರೆ. ಸಾಮಾಜಿಕವಾಗಿ ಒಂಟಿ ಅನ್ನುವ ಭಾವನೆ. ಇದು ಮುಂದೆ ಖಿನ್ನತೆ (Depression), ಮಾನಸಿಕ ಅಸ್ವಸ್ವತೆ, ಖುಣಾತ್ಮಕ ಆಲೋಚನೆ, ಎಲ್ಲಾ ಇದ್ದರೂ ಇಲ್ಲದಿರುವದರ ಬಗ್ಗೆ ಯೋಚನೆ, ಕೀಳರಿಮೆ ಮುಂತಾದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಮಕ್ಕಳಿಗೆ ಆಧುನಿಕ ಕಾಲದ ಸಾಧನಗಳನ್ನು ತೋರಿಸಿ, ಎಲ್ಲವೂ ಒಂದು ಇತಿಮಿತಿಯಲ್ಲಿ ಇದ್ದರೆ ತುಂಬಾನೇ ಒಳಿತು. ಮಕ್ಕಳ ಮನಸ್ಸು ಮತ್ತು ಮೆದಳು ಒಂದು ತರಹ ಮಣ್ಣಿನ ಮುದ್ದೆ ಇದ್ದಂತೆ, ಒಳ್ಳೇದು ಯಾವುದು, ಕೆಟ್ಟದು ಯಾವುದು? ಅಂತ ಗೊತ್ತಾಗೋ ವಯಸ್ಸು ಅಲ್ಲ. ಕುಂಭಾರ ಗಡಿಗೆಗೆ ಹದ, ಆಕಾರ ಕೊಡುವಂತೆ ನಾವು ಹಿರಿಯರು ಮಕ್ಕಳಲ್ಲಿ ಒಳ್ಳೆಯ ವಿಚಾರಗಳ ಅರಿವು, ಅಭಿರುಚಿ, ಆಲೋಚನೆ, ಚಿಂತನೆ ಮೂಡಿಸಬೇಕು.  ಲೋಕೋಭಿನ್ನ ರುಚಿ ಅನ್ನುವ ಹಾಗೆ ಒಂದೊಂದು ಮಗುವು ಅದಕ್ಕೆ ಇಷ್ಟ ಆಗುವ, ಪೂರಕವಾಗಿರುವ ವಿಷಯಗಳಲ್ಲಿ ಆಸಕ್ತಿ ಮೂಡಿಸಿಕೊಳ್ಳುತ್ತದೆ. ಜೀವನದಲ್ಲಿ ಇದು ಮಗುವಿಗೆ ಮುಂದೆ ಬರಲು, ಹೊಂದಿಕೊಂಡು ಹೋಗಲು ಸಹಾಯಕ.

ಈಗ ಕಾಲ ತುಂಬಾ ವೇಗವಾಗಿ ಓಡ್ತಾಇದೆ. ಬೇಡಾ ಅಂದ್ರು ನಮ್ಮ ಸುತ್ತಲಿನ ಪರಿಸರ, ಸಮಾಜ ನಮ್ಮನ್ನು ಓಡುವ ಹಾಗೆ ಮಾಡ್ತಾಯಿದೆ. ನಮ್ಮ ಜೊತೆಗೆ ಮಕ್ಕಳನ್ನು ಓಡಿಸ್ತಾ ಇದ್ದೀವಿ! ಮಕ್ಕಳ ಸಹಜ ಸ್ವಭಾವವಾದ ಕುತೂಹಲ, ಅನ್ವೇಷಣಾ ಮನೋಭಾವ ಎಲ್ಲವನ್ನ ಪಕ್ಕಕ್ಕೆ  ತಳ್ಳಿ ಬಿಡ್ತಾ ಇದ್ದಿವಿ. ನಮಗೆ ಗೊತ್ತಿಲ್ಲದೇ ಮಕ್ಕಳ ಮುಗ್ಧ ಸ್ವಭಾವ, ಸಾಮೀಪ್ಯ ಎಲ್ಲವನ್ನ ಕಳೆದುಕೊಳ್ಳುತ್ತಾ ಇದ್ದೀವಿ. ಮುಂದೆ ಮಕ್ಕಳು ದೊಡ್ಡವರಾದ ಮೇಲೆ ಮಕ್ಕಳು ಒಂಟಿಯಾಗಿರಲು ಇಷ್ಟ ಪಡ್ತಾರೆ, ಅವರಿಗೆ ಮೊಬೈಲ್ ಒಂದಿದ್ರೆ ಸಾಕು ಯಾರು ಬೇಡ, ಅವರ ನಿರ್ಧಾರ (Decision ) ಅವರೇ ತೊಗೊಳ್ತಾರೆ , They are quite  ಇಂಡಿಪೆಂಡೆಂಟ್ ಅಂತ ಹೆಮ್ಮೆಯಿಂದ ಹೇಳ್ತಾರೆ.  ಮುಂದೊಂದು ದಿನ ವಿಪರೀತಕ್ಕೆ ಹೋದಾಗ ಎಲ್ಲಾ ಮುಗಿದುಹೋಗಿರುತ್ತದೆ. ಬೇಕೋ ಬೇಡವೋ ಒಟ್ಟಿನಲ್ಲಿ ಈ "Mobile" ಎನ್ನುವ ಮಾಯಾಮೃಗದ ಹಿಂದೆ ಬಿದ್ದಿದ್ದೇವೆ. ತಾಯಿ, ತಂದೆಯರೂ ಆದಷ್ಟು ಬೇಗನೆ ಎಚ್ಚತ್ತು ಕೊಂಡು ಮಕ್ಕಳ ಜೊತೆ ಕಾಲ ಕಳೆದು ಒಳ್ಳೆಯ ಮೌಲ್ಯಗಳನ್ನು ಹೇಳಿಕೊಟ್ಟರೆ ಅದಕ್ಕಿಂತ ಸ್ವರ್ಗ ಬೇರಿಲ್ಲ.

ಇದಕ್ಕೆಲ್ಲ ಒಂದೇ ಮದ್ದು ಮಕ್ಕಳನ್ನ ಆಡಲು ಬಿಡಿ, ಬೇರೆಯವರ ಜೊತೆ ಬೆರೆಯಲು ಬಿಡಿ. ನೀವೇ ಗಮನಿಸಿ ಅವರ ಬೆಳವಣಿಗೆ.. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಅಲ್ಲಲ್ಲೇ ತಿದ್ದಿ. ಸ್ವಚ್ಛ ಮತ್ತು ಸ್ವಾಸ್ತ್ಯ ಸಮಾಜಕ್ಕಾಗಿ ಇಷ್ಟನ್ನು ಮಾಡಲಾರಿರಾ?

ಈಗ ಹೇಳಿ ಮಕ್ಕಳಿಗೆ ಆಟಗಳು ಬೇಕೇ? ಬೇಕೇ? 
ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ, ಭವಿಷ್ಯದ ಸಮಾಜಕ್ಕಾಗಿ, ಮುಂದಿನ ಪೀಳಿಗೆಯ ಸ್ವಾಸ್ಥ್ಯಕ್ಕಾಗಿ ಆಟಗಳು ಖಂಡಿತ ಬೇಕು!

- ತನುಶ್ರೀ ಎಸ್. ಎನ್
 ೨೬-೦೯-೨೦೧೯
 

Monday, July 22, 2019

ಚೌಕಭಾರ - ಭಾಗ ೨

ಚೌಕಭಾರ - ಭಾಗ ೨
-------------------------

ಚೌಕಭಾರ  ಬಗ್ಗೆ ಮೊದಲ ಲೇಖನ ಬರೆದಾಗ, ನನ್ನ ಪರಿಚಿತರಲ್ಲಿ ಹಲವಾರು ನೆನಪುಗಳನ್ನ ಹುಟ್ಟು ಹಾಕಿದ್ದು, ಅವರ ಸವಿ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಪ್ರೀತಿಯ ಧನ್ಯವಾದಗಳು. ಈಗ ಮುಂದಿನ ಭಾಗವನ್ನು ಬರೆದಿರುವೆ.

ನನ್ನ ಮಗಳು ಚಿಕ್ಕವಳಿದ್ದಾಗ ಹರಿಹರದ ಹರಿಹರೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದೆವು. ದೇವಸ್ಥಾನದ ಕಟ್ಟೆ ಮೇಲೆ ಕಂಡ ಚೌಕಬಾರ ಕೆತ್ತನೆ ತೋರಿಸಿ ಸ್ಕೇಲ್ ನಿಂದ ಎಷ್ಟು ಚೆನ್ನಾಗಿ ಗೆರೆ ಎಳೆದಿದ್ದಾರೆ! ಅಲ್ವ ಅಮ್ಮ ಅಂತ.. ನಾವು ಶಾಲೆಯಲ್ಲಿ ಅಂಕೆ-ಸಂಖ್ಯೆ ಬರೆಯುವ ಪುಸ್ತಕದ ಹಾಳೆ ಇದ್ದ ಹಾಗೆ ಇದೆ ಅಂತ. ನಂತರ ಕೋಟಿಪುರದ ಕೋಟೇಶ್ವರ, ಹಾವೇರಿಯ ಸಿದ್ದೇಶ್ವರ ದೇವಸ್ಥಾನಗಳಿಗೆ ಕರೆದುಕೊಂಡು ಹೋದಾಗ ಅಮ್ಮ ಇಲ್ಲೂ ಅದೇ ಥರ ಇದೆಯಲ್ಲಾ ಎಂದು ತುಂಬಾ ಆಶ್ಚರ್ಯ ಪಟ್ಟಳು. ಅಮ್ಮ, ನಾವು ನೋಡಿರುವ ದೇವಸ್ಥಾನಗಳಲ್ಲಿ ಈ ಥರ ಗೆರೆಗಳು, ಚೌಕಗಳಿವೆ. ಯಾಕೆ? ಏನು ಮಾಡುತಿದ್ದರು? ಮಗಳಿಗೆ ಅದು ಚೌಕಬಾರ ಆಟ, "ನಿನ್ನ ಹಾವು-ಏಣಿ" ಆಟದ ಥರ ಮನೆ ಆಟ(Board  game ). ಹೇಗೇ ಆಟ ಆಡುತ್ತಾರೆ, ಕವಡೆ ಅಂದ್ರೆ ಏನು? ಅಂತ ಒಂದೇ ಸಮನೆ ಪ್ರಶ್ನೆಗಳು?  ಇದು ನಮ್ಮ ದೇಶದ ತುಂಬಾ ಹಳೆಯ ಆಟ ಅಂತ ಹೇಳಿದ್ರೆ... ಅಜ್ಜಿಗೂ ಗೊತ್ತ? ತಾತು,ಪೆರಿಗೂ ಗೊತ್ತ? ಅವರಜ್ಜಿ,ತಾತಗೂ ಗೊತ್ತ? ಎಲ್ಲ ಅಜ್ಜಿ ತಾತಗೂ ಗೊತ್ತ? ಆಗಲೇ ಕವಡೆಗಳು ಇತ್ತಾ? ಅಂತ ನೂರೆಂಟು ಪ್ರಶ್ನೆಗಳು. ಕವಡೆನ Dice ರೀತಿ ಬಳಸುತ್ತೇವೆ. ಕವಡೆ ಅಂದ್ರೆ ಕಪ್ಪೆ ಚಿಪ್ಪು ತರ ಇರುತ್ತೆ ಅಂದ್ರೆ, ಎಲ್ಲರು ಸಮುದ್ರಕ್ಕೆ ಹೋಗಿ ತಂದಿದ್ರ? ಅದನ್ನ ಗೊಂಬೆಗಳ ತರ ಫ್ಯಾಕ್ಟರಿಯಲ್ಲಿ ಮಾಡೋಕ್ಕೆ ಆಗಲ್ಲವಾ? ಅಂತ ಮತ್ತೊಂದಿಷ್ಟು ಪ್ರಶ್ನೆಗಳು. ಕವಡೆ ಸಿಗದೇ ಇದ್ದರೇ! ಅಂತ ಮಗದೊಂದು ಪ್ರಶ್ನೆ... ಆಗ ಹುಣಸೆ ಬೀಜನ ಉರುಟು ನೆಲದ ಮೇಲೆ ಉಜ್ಜಿ ಉಜ್ಜಿ ಒಂದು ಕಡೆ ಬಿಳಿ ಮಾಡ್ತಾ ಇದ್ದ್ವಿ. ಅದನ್ನ ಕವಡೆ ತರ ಉಪಯೋಗಿಸುತ್ತ ಇದ್ವಿ ಅಂತ ಹೇಳಿದೆ. ಕಾಯಿಗಳಿಗೆ ಏನು ಮಾಡ್ತಾ ಇದ್ರಿ ಅಂದಾಗ ಶೇಂಗಾ ಬೀಜ, ಹುರುಗಡಲೆ ಅಂತ ಹೇಳಿದೆ. ಯಾಕೆ! ಅಂತ ಕೇಳಿದ್ರೆ ಆಟ ಆದ ಮೇಲೆ ತಿನ್ನೋಕ್ಕೆ ಅಂತ ಅಂದೇ ;-)  ೫ ಮನೆ ಯಾಕೆ ಅಂತ ಕೇಳಿದ್ರೆ, ನಂ ತಲೆ ಕೆರೆದುಕೊಂಡೆ.. ಛೆ! ಈ ಆಟ ಚಿಕ್ಕವಳಾಗಿದ್ದಾಗಿಂದ ಆಡ್ತಾ ಇದ್ರೂ ನಂಗೆ ಏನು ಗೊತ್ತಿಲ್ಲವಲ್ಲ ಅಂತ ಅನಿಸಿತು.

ಆವಾಗಿನಿಂದಲೇ ಈ ದೇಶಿಯ ಆಟಗಳ ಕುರಿತು 'ಗುಂಗಿ ಹುಳ' ನನ್ನ ತಲೆಯಲ್ಲಿ ಬಂದಿದ್ದು. ನನ್ನ ಮಗಳಿಗೆ ಈ ಆಟವನ್ನು ಹೇಳಿಕೊಡಬೇಕು. ನನ್ನ ಮಗಳಿಗೆ ಅಷ್ಟೇ ಅಲ್ಲ ಬೇರೆ ಮಕ್ಕಳಿಗೂ ಕೂಡ ನಾವು ಬಾಲ್ಯದಲ್ಲಿ ಆಡಿದ ಆಟಗಳನ್ನು ಹೇಳಿಕೊಡಬೇಕು ಅಂತ ಅನ್ನಿಸಿದ್ದು. ನಾನು ನನ್ನ ಕನಸಿನ ಲೋಕದಲ್ಲಿ ಮುಳುಗಿರುವಾಗ, ಅಮ್ಮ, ನಂಗೆ ಯಾವಾಗ ಆಟ ಹೇಳಿಕೊಡ್ತೀಯಾ ಅಂತ ಕೇಳಿದಳು. ಖಂಡಿತವಾಗಿಯೂ, ಮುಂದಿನ ರಜೆಯಲ್ಲಿ ಹೇಳಿಕೊಡ್ತೀನಿ ಅಂತ ಹೇಳಿದ್ದೆ. ಅದರಂತೆ, ಈ ಬಾರಿಯ ಬೇಸಿಗೆಯಲ್ಲಿ ಅವಳಿಗೆ ಚೌಕಾಬಾರದಲ್ಲಿ ತುಸು ಆಸಕ್ತಿ ಹುಟ್ಟಿಸಿರುವೆ.  

- ಎಸ್ ಎನ್ ತನುಶ್ರೀ
 ೨೨/೦೭/೨೦೧೯

Wednesday, July 03, 2019

ಚೌಕಭಾರ

ಚೌಕಭಾರ

ಈ ಸಲ ಬೇಸಿಗೆ ರಜೆಯಲ್ಲಿ ನನ್ನ ಮಗಳಿಗೆ ತುಂಬಾ ಬೇಜಾರೂ. ಹೊರಗಡೆ ತುಂಬಾ ಬಿಸಿಲು ಆಡೋಕ್ಕೆ ಆಗೋಲ್ಲ. ಮನೆಯಲ್ಲಿ ಬೇರೆ ಏನಾದ್ರು ಚಟುವಟಿಕೆ ಮಾಡೋಣ ಅಂದ್ರೆ ಅದೂ ಬೇಜಾರು. ನಾವು ಚಿಕ್ಕವರಿದ್ದಾಗ ಏನು ಮಾಡ್ತಾಇದ್ವಿ ಅಂತಾ ಯೋಚನೆ ಮಾಡಿದಾಗ, ಬಾಲ್ಯದ ಸವಿನೆನಪುಗಳ ಫ್ಲಾಶ್ ಬ್ಯಾಕ್... ಮುಖದಲ್ಲಿ ಒಂದು ಮುಗುಳ್ನಗೆ, ಮನಸ್ಸು ಉಲ್ಲಸಿತ. ಏನಪ್ಪಾ  ಅಂಥಾದ್ದು ಅಂತ ಯೋಚನೆ ಮಾಡ್ತಾ ಇದ್ದೀರಾ? ಅದುವೇ ಚೌಕಭಾರ. ಅವಳಿಗೆ ಚೌಕಭಾರ ಹೇಳಿಕೊಡೊಕ್ಕೆ ಒಳ್ಳೆ ಸಮಯ ಅಂತ ಕಾರ್ಯರೂಪಕ್ಕೆ ಇಳಿಸಿದೆ.

ನಮ್ಮ ಮನೆಯಲ್ಲಿ ಎಲ್ಲರೂ ಅಂದ್ರೆ ಅಕ್ಷರಶ: ಎಲ್ಲರೂ ಚೌಕಭಾರ ಪ್ರಿಯರೇ. ಕವಡೆಗಳು ಯಾವಾಗಲು ಇದ್ದೇ ಇರುತ್ತೆ. ಶುರುವಾಯಿತು ನಮ್ಮ ಹುಡುಕಾಟ. ಒಂದು ಮಣೆ ಮೇಲೆ ಸೀಮೆಸುಣ್ಣದಿಂದ ೫-ಮನೆ ಚೌಕಭಾರ ಚಿತ್ರ ಬರೆದಿದ್ದು ಆಯಿತು. ಮಗಳನ್ನು ಸೇರಿಸಿಕೊಂಡು ಅಡುಗೆ ಮನೆಗೆ ನುಗ್ಗಿದ್ದಾಯಿತು.. ಅಡುಗೆಮನೆ ಯಾಕೆ ಅಂತೀರಾ? ಬೇಕಲ್ಲ ಆಡೋಕ್ಕೆ ಕಾಯಿಗಳು. ೪- ಹುಣಸೆ ಬೀಜ, ೪-ಪಿಸ್ತಾ ಸುಲಿದ ಸಿಪ್ಪೆ , ೪-ಅಡಿಕೆ ಚೂರುಗಳು. ಇನ್ನೊಂದು ಕಾಯಿಗೆ ಏನು ಮಾಡುವುದು? ಶೇಂಗಾ ಬೀಜ, ಹುರುಗಡಲೆ ಕಾಳುಗಳು ಆಗೋಲ್ಲ, ಯಾಕಂದ್ರೆ ನನ್ ಮಗ ಗುಳುಕಾಯ ಸ್ವಾಹಾ ಮಾಡ್ತಾನೆ. ಅಡುಗೆ ಮನೆ ಬಿಟ್ಟು ಅಮ್ಮನ ಹೊಲಿಗೆ ಡಬ್ಬಕ್ಕೆ ಕೈ ಹಾಕಿ ೪-ಗುಂಡಿಗಳನ್ನು ಕಾಯಿಗಳಾಗಿ ಮಾಡಿದ್ದ್ವಿ .

ಅಕ್ಕ-ಪಕ್ಕದ ಮನೆ ಹುಡುಗರನ್ನ ಬನ್ರೋ ಚೌಕಭಾರ ಆಡೋಣ ಅಂತ ಕರೆದಿದ್ದು ಆಯ್ತು. ಆಟದ ನಿಯಮಗಳನ್ನು ಹೇಳ್ತೀನಿ ಕೇಳ್ರೋ ಅಂದ್ರೆ, ಆಂಟಿ ಆಟ ಆಡ್ತಾ ಹೇಳಿಕೊಡಿ ಅಂತಾರೆ. 'ಇಟ್ ಮನೆ ಚಟ್', 'ಮುಟ್ಟಿದ ಮನೆ ಚಟ್', 'ಇಟ್ಟಿದ್ ಕಾಯ್ ಚಟ್', 'ಮುಟ್ಟಿದ್ ಕಾಯ್ ಚಟ್', 'ಮೂರು ನಾಲ್ಕು ಶ್ಯಾಮ್', 'ಮೂರು ಎಂಟು ಶ್ಯಾಮ್ ', 'ಗಟ್ಟಿ ', 'ಜೋಡಿ ಗಟ್ಟಿ ', 'ಟೊಳ್ಳು ಗಟ್ಟಿ ', 'ಸೀ ಕಾಯ್' ಕೊಡುವುದು ಮುಂತಾದವು ಹೇಳಿದೆ. ಅಂತೂ ಇಂತೂ ಆಟ  ಶುರುವಾಯಿತು. ಶುರುವಿನಿಂದಲೇ ಮಜಾ ಮಜಾ, ದೇವರಿಗೆ, ದಿಂಡರಿಗೆ, ನಮಗೆ ಅಂತ ಹೇಳಿ ಕವಡೆ ಹಾಕುವುದು. ಅಪ್ಪಿ ತಪ್ಪಿ ನಾಲ್ಕೋ, ಎಂಟೋ ಬಿದ್ದರೆ ನಮಗೆ ಅಂತ ಹೇಳೋದು, ಅಥವಾ ಮೂರು ಬಿದ್ದಿದ್ರೆ ನಾಲ್ಕು, ಒಂದು ಬಿದ್ದಿದ್ರೆ ಎಂಟು ಅಂತ ದಾರಿ ತಪ್ಪಿಸೋದ್ ಪ್ರಯತ್ನ ನಡಿತಾ ಇರುತ್ತೆ. ಇನ್ನೇನು ನಮಗೆ ಒಂದೇ ಒಂದ್ ಬಿದ್ರೆ ಆಟ ಮುಗಿಯುತ್ತೆ ಅಂತ ಇದ್ರೆ, ಸಾಲು ಸಾಲಾಗಿ ನಾಲ್ಕು ಎಂಟು ಬೀಳ್ತಾ ಇರುತ್ತೆ. ನಮ್ಮ ಚಡಪಡಿಕೇನು ಏರತಾ ಇರುತ್ತೆ. ಆಡೋಕ್ಕೆ ಶುರುಮಾಡಿ ೨ ಘಂಟೆಯಾದ್ರು ಮುಗಿದಿಲ್ಲ. ಎಲ್ಲರ ಮುಖದಲ್ಲೂ ಒಂಥರ ಉತ್ಸಾಹ, ಕಾತುರ. ಎಲ್ಲರಲ್ಲೂ, ಕಾಯಿಗಳನ್ನ ಹೊಡಿಬೇಕು, ನನ್ನ ಕಾಯಿಗಳನ್ನ ಹಣ್ಣು ಮಾಡಬೇಕು.. ಹೇಗೆ ಕಾಯಿಗಳನ್ನ ನೆಡಸಬೇಕು ಅನ್ನೋ ಲೆಕ್ಕಾಚಾರ. ಆಟ ಮುಗಿದಾಗ ಎಲ್ಲರ ಮೈ ಮನಸ್ಸು ಹಗುರ.. ಮತ್ತೊಮ್ಮೆ ಆಡೋಕ್ಕೂ ತಯಾರ್ !

ನಿಮ್ಮ ಹತ್ತಿರ ವಿಶಿಷ್ಟ/ವಿಶೇಷ ವಾದ ಚೌಕಭಾರ ಅನುಭವ ಇದ್ದರೆ ಹಂಚಿಕೊಳ್ಳಿ. 

Sunday, September 23, 2012

Soans Island - Basruru, Kundapura

Suddenly we decided to visit western-coast of karnataka. My mind was already sketching one more visit to Soans-Island @basuru, Karnataka.

From Udupi we reached Kundapura, Karnataka after an hour and half journey.  Reached the Soans-Island after 10 mins drive from Hotel Sharon. It was already 7.30 pm,  Pitch dark. First time when we went, never knew that we have to travel in boat to reach the destination. We were full of fear. Only after stepping into boat all our fear vanished with in minutes. The sky was jet black and full of stars, melodious river flow, a breeze of fresh air made us more thrilled. The boatman was working Huttu-Golu carefully and ensuring safety. 
After reaching the island, our joy was double to see the house doors on right of bank of river. The rooms were too good with quality constructions. We had a cup of hot-tea in night. The whole island has only 2 families + caretaker family. No one else. So it was like our own time, life and our own world. We listened to light musics and off to sleep. 

Next day, morning as planned my two little friends Rachu, Keerthu were ready by early morning 5.00 am to visit Kodi beach near kundapura. Guys, it was worth watch the calm, nice beach in early morning. We made sand-castles, went for long walk on beach shore and headed back to Island by 9.30. Already we were feeling hungry and so Neerdose, Kaayi chutney sweet and khara were already waiting for us. Wow!!! what a delicious break fast. We just enjoyed.. enjoyed.. enjoyed.. We went for a round in Island. The island hosts a lot of flora and fauna, which is feast to eyes. Flora and fauna particuarly enjoyable from  July to December. If you are lucky, you can see the peacocks - coming from neighboring paddy fields. The places houses a variety houses like river cottage, Gazebo, Hut, Tents etc.

Overall everyone enjoyed and relaxed in the Island. A must visit place or option to stay if you are travelling between Mangalore to Murudeshwara.

Path between house and river
  
Add caption


Bird Of paradise
 
Bell flowers
 
Varahi river runs around Island


   For booking contact: Mr Vishwas Soans
Soans Holidays (I) Pvt. Ltd.
Grace Villa, C. S. Road
Kundapur - 576 201.
Karnataka, India.
Tel : 91 8254 231683
M : 94481 20826
http://www.soans.com/soansisland.htm
Email : info@soans.com

SWOT is what?

Hey, let's do a SWOT analysis - my hubby said on the sea shore at Suratkal. It was around sunset time. I was in a mood for casual chat only. So to avoid, I said `What!!! It can be applied to Projects or Business only. Why on us?' Finally I agreed to do the SWOT. Only after the session, did I feel a need for SWOT at regular intervals. It was total fun and is very helpful for self improvement.

SWOT is a analysis method used to evaluate the Strengths, Weaknesses/Limitations, Opportunities and Threats involved in a person and mainly used to identify favorable and unfavorable situations around us.


Strengths: Characteristics of a person, which is beneficial & motivating.. Eg: Patience, Dedication
Weaknesses: Drawbacks of a person, attitude mismatch.. Eg: Bad manners, Disturbed behavior  Impatient
Opportunities: To make use of situations or turns at it best.. Eg: Making good choices, Hard work, Smartness
Threats: The fear components of person either for himself or others.. Eg: Negative thoughts, Failed to take risk

SWOT is very much required to analyse one's behavior and progress over a period of time. Believe me, the session with real - frank chat helps one to trace their progress, understand what's missing in their lives. So why are you waiting? Start doing SWOT analysis with your near-dear ones :-)