Wednesday, July 20, 2011

ಸಾಯಿ ರಂಗಾ ವಿದ್ಯಾ ಸಂಸ್ಥೆ

                  ಅದೊಂದು ಊರ ಹೊರಗಿರುವ ಜನನಿಬಿಡ ಪ್ರದೇಶ.. ಅಲ್ಲೊಂದು ದೊಡ್ಡ ಮನೆ, ಸುತ್ತಲು ಪ್ರಶಾಂತವಾದ ವಾತಾವರಣ.. ಶುದ್ಧವಾದ ಗಾಳಿ, ಯಥೇಚ್ಚವಾದ ಬೆಳಕು. ಒಳಗೆ ಅಲ್ಲಲ್ಲಿ ಮಕ್ಕಳ ಗುಂಪು.. ಅವರೆಡೆಗೆ ನೋಟ ಹರಿಸಿದರೆ ರಾಶಿ ಮುಗುಳ್ನಗೆ ಸಿಕ್ಕಿತು.. ಹಾ....
ನಾ ಈಗ ಹೇಳ ಹೊರಟಿರುವುದು "ಶ್ರೀ ಸಾಯಿ ರಂಗ ವಿದ್ಯಾ ಸಂಸ್ಥೆ (ಕಿವುಡ ಮಕ್ಕಳಿಗೆ), ಮೈಸೂರು" ಬಗ್ಗೆ.

                  ಇಲ್ಲಿ ಗಂಡು ಮಕ್ಕಳಿಗೆ 1ರಿಂದ - 10ನೇ ತರಗತಿವರೆಗೆ ಉಚಿತ ವಸತಿ ಮತ್ತು ವಿದ್ಯಾಭ್ಯಾಸಕ್ಕೆ ಅನುಕೂಲವಿದೆ. ಅದರ ಜೊತೆಗೆ ಜೀವನಕ್ಕೆ ಉಪಯೋಗವಾಗುವಂತ ಅನೇಕ ಕರಕುಶಲ ಕಲೆಗಳನ್ನು (ಟೇಲರಿಂಗ್, ಕಂಪ್ಯೂಟರ್ ಜ್ಞಾನ, ಅಡುಗೆ ಕೆಲಸ) ಸಹ ಹೇಳಿಕೊಡುತ್ತಾರೆ.

                  ಇಲ್ಲಿಯ ಮಕ್ಕಳಿಗೆ ಕಿವಿ ಕೇಳದಿದ್ದರೂ, ಮಾತು ಬರದಿದ್ದರೂ ಜೀವನದ ಬಗೆಗಿನ ಅವರ ಉತ್ಸಾಹ ಮೆಚ್ಚುವಂತದ್ದು. ಸಹಾಯ, ಶಿಸ್ತು, ವಿಧೇಯತೆಗಳಲ್ಲಿ ಒಂದು ಹೆಜ್ಜೆ ಮುಂದು. ಈ ಮಕ್ಕಳ ಬೆನ್ನನು ತಟ್ಟಿ, ಅವರಡೆಗೆ ಸ್ವಲ್ಪ ಗಮನ ಹರಿಸಿ ಚೆನ್ನಾಗಿದೆ, ಇನ್ನೂ ಉತ್ತಮವಾಗಬೇಕು, ಸುಧಾರಿಸು ಎಂದು ಹೇಳಿದರೆ ಅವರಿಗೆ ಖುಷಿಯೋ ಖುಷಿ. ಇನ್ನೂ ಪ್ರಶಂಸೆ ಮಾಡಿ ಬೆನ್‌ನ್ನು ತಟ್ಟಿದರೆ, ತಲೆ ಸವರಿದರೆ ಅಪರಿಮಿತ ಹಿಗ್ಗು. ಸ್ಪರ್ಶ ಸುಖವನ್ನು ಸಾಮಾನ್ಯ ಮಕ್ಕಳಿಗಿಂತ ಹೆಚ್ಚು ಅನುಭವಿಸಿದರು.

                   ಸಾಮಾನ್ಯವಾಗಿ ಕಿವುಡ, ಮೂಗ ಮಕ್ಕಳಿಗೆ ಸ್ಪೀಚ್ ಥೆರಪಿ ಕೊಡಲಾಗುತ್ತದೆ. ಸಾಮಾನ್ಯವಾಗಿ  ಸ್ಪೀಚ್ ಥೆರಪಿ ಶಾಲೆಗಳಲ್ಲಿ ಶುಲ್ಕ ಹೆಚ್ಚು ( ಕಾರಣ: ದುಬಾರಿಯಾದ ಶ್ರವಣ ಸಾಧನಗಳು ಮತ್ತು ಸಂಬಂಧ ಪಟ್ಟಸಾಮಗ್ರಿಗಳು). ಇದರಲ್ಲಿ ತಾಯಿಯ ಅಥವಾ ಮನೆಯವರ  ಶ್ರಮ, ಅಗತ್ಯ ಮತ್ತು ಸಮಯ ಬಹು ಮುಖ್ಯ. ಮಗುವಿನೊಂದಿಗೆ ತಾಯಿಯೂ ಸಹ ಶಾಲೆಯಲ್ಲಿ ಇದ್ದು, ಕಲಿತು, ಮಗುವಿಗೆ ಕಲಿಸಬೇಕು. ಮನೆಯಲ್ಲಿಯೂ ಸಹ ಕಲಿಕೆ ಮುಂದುವರೆಸುವ ಅಗತ್ಯ ಬಹಳ. ಆದರೆ ಬಡ ತಂದೆ, ತಾಯಿಗಳಿಗೆ, ಜೀವನೋಪಾಯಕ್ಕಾಗಿ ಕೆಲಸಕ್ಕೆ ಹೊರಹೋಗುವ ತಾಯಿಯರಿಗೆ ಇದು ಮರೀಚಿಕೆ ಮತ್ತು ಅಸಾಧ್ಯ(ಆತಿ ಹೆಚ್ಚು ಶುಲ್ಕ, ಸಮಯದ ಅಭಾವ) . ಅಂತಹವರಿಗೆ "ಸಾಯಿ ರಂಗ ವಿದ್ಯಾ ಸಂಸ್ಥೆ" ಒಂದು ವರ.

ಶಾಲೆಯ ಪರಿಸರ, ಅಡುಗೆಮನೆಯ ಶುಚಿತ್ವ, ಮಲಗುವ ಕೋಣೆಯ ವ್ಯವಸ್ಥೆ ಬಲು ಅಚ್ಚುಕಟ್ಟು.
ಮಕ್ಕಳು ಎಲ್ಲ ತರಹದ ಕೆಲಸ ಮಾಡುವಷ್ಟು ತರಬೇತಿ ಪಡೆದಿದ್ದಾರೆ.

ಮಕ್ಕಳಿಗೆ ಪಾಠ ಹೇಳಿಕೊಡುವ ವಿಧಾನವು ಸಹ ಅತ್ಯಕರ್ಷಕವಾಗಿದೆ. ನಾವು ಸಹ ಅಂತಹ ಉತ್ತಮ ವಿಧಾನದಲ್ಲಿ ಕಲಿತಿಲ್ಲವೇನೋ ಎಂಬ ಭಾವನೆ ಉಂಟಾಯಿತು.  9 ನೆ ತರಗತಿಗೆ, ಮುದ್ದಣ, ಮನೋರಮೆಯರ ಕವಿ-ಪರಿಚಯ ಬೋರ್ಡ್ ಮೇಲೆ ಬರೆದು ಹೇಳಿಕೊಟ್ಟ ರೀತಿ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಇನ್ನು 3 ನೆ ತರಗತಿ ಮಕ್ಕಳಿಗೆ ಏರಿಕೆ, ಇಳಿಕೆ  ಕ್ರಮ ಹೇಳಿಕೊಟ್ಟಿರುವ ರೀತಿ ಬಲು ಅಧ್ಬುತ. ವಿವರಕ್ಕಾಗಿ ಕೆಳಗಿನ ಚಿತ್ತ್ರವನ್ನು ನೋಡಿ.









ವಿಳಾಸ:
ಶ್ರೀ ಸಾಯಿ ರಂಗ ವಿದ್ಯಾ ಸಂಸ್ಥೆ (ಕಿವುಡ ಮಕ್ಕಳಿಗೆ), ಮೈಸೂರು 
No 764/A, "B"  Layout
Bannimantap, Mysore 570015

ಹೆಚ್ಚಿನ ವಿವರಕ್ಕಾಗಿ ಈ ಬ್ಲಾಗ್ ನೋಡಿ...




Thursday, July 07, 2011

ತೀಸ್ತಾ ತೀಸ್ತಾ ತೀಸ್ತಾ




ಆಹಾ!! ತೀಸ್ತಾ!

 ನೆನಪಿಸಿಕೊಂಡರೆ ಮೈ ಮನಗಳೆರಡು ನವಿರೇಳುತ್ತದೆ. ಏನಿದು ತೀಸ್ತಾ!!! ವಾವ್ಹ್ಹ್   ಆದೇ ಸಿಕ್ಕಿಂನ ಜೀವಾಳ, ನನ್ನ ಮನಸನ್ನ ಸೂರೆಗೊಂಡಿರುವ ನದಿ, ತೀಸ್ತಾ.

ಚಿಕ್ಕಂದಿನಿಂದಲೂ ಹತ್ತಾರು ನದಿಗಳನ್ನು, ನದಿಗಳ ಹರಿವನ್ನು ನೋಡಿದ್ದೇನೆ. ಒಂದೆರಡು ಸರಿಯಲ್ಲ್ಲಹಲವಾರು ಸಾರಿ. ಯಾವತ್ತು ಈ ಪರಿ ರೋಮಾಂಚಿತವಾಗಿರಲ್ಲಿಲ್ಲ ಮತ್ತು ನದಿಯ ಹರಿವಿನಗುಂಟ ಸಾಗಿರಲಿಲ್ಲ. ಆದರೆ ತೀಸ್ತಾ ನದಿಯ ವಿಷಯದಲ್ಲಿ ಆದ ಅನುಭೂತಿಯೋ ವರ್ಣಿಸಲಸಾಧ್ಯ.

ಸಿಕ್ಕಿಂನಲ್ಲಿ ಇದ್ದಷ್ಟು ದಿನವೂ, ತೀಸ್ತಾ ನದಿಯೂ ನಮ್ಮ ಸುತ್ತಮುತ್ತಲೇ ಹರಿಯುತ್ತಿತ್ತು. ಎಲ್ಲೆಂದರಲ್ಲಿ ತನ್ನ ಒನಪು, ವೈಯ್ಯಾರಗಳನ್ನು ಪ್ರದರ್ಶಿಸುತ್ತ್ತಾ ಎಲ್ಲರನ್ನು ಸೆಳೆಯುತ್ತಿತ್ತು. ನಮ್ಮನ್ನು ಖುಷಿಪಡಿಸಲೆಂದೇ ಬಳಕುತ್ತಾ ಸಾಗುತ್ತದೆ. ಹೇಗೆಂದರೆ ನಾವು ಅದರ ಅಭಿಮಾನಿಯಗಲೇಬೇಕು. ಇನ್ನು ಪ್ರಕೃತಿಪ್ರಿಯರಾಗಿಬಿಟ್ಟರಂತೂ ಮುಗಿಯಿತು.. ನದಿಯನ್ನು ಬಿಟ್ಟು ಹೊರಡಲು ಮನಸ್ಸೇ ಬಾರದು. 

ತೀಸ್ತಾ ನದಿಯನ್ನು ನಾವು ಮೊದಲು ನೋಡಿದ್ದು ಪಶ್ಚಿಮ-ಬಂಗಾಳದ ನ್ಯೂ-ಜಲಪೈಗುರಿ(New Jalpaiguri) ಹತ್ತಿರ. ಆಲ್ಲಿ ವಿಶಾಲವಾದ ಬಯಲ್ಲಲ್ಲಿ ರಭಸವಾಗಿ ಹರಿಯುತ್ತಿರುವ ನದಿಯನ್ನು ನೋಡೇ ನಾವು ಖುಷಿಯಾಗಿದ್ದೆವು. ಆಮೇಲೆ ತಿಳಿಯಿತು ಅದು ಏನು ಅಲ್ಲ.. ಮುಂದೆ ಇನ್ನು ರೋಮಾಂಚಕಾರಿಯಾಗಿದೆಂದು... ನ್ಯೂ ಜಲಪೈಗುರಿಯಿಂದ (New-Jalpaiguri) ಡಾರ್ಜೀಲಿಂಗ್(Darjeeling)  ಹೋಗುವಾಗ ನಾವು ನದಿಯನ್ನು ಅದರ ಇಕ್ಕೆಲಗಳಲ್ಲಿ ಬೆಳೆದಿರುವ ಹೊಲ-ಗದ್ದೆಗಳ ಹಚ್ಚ ಹಸಿರನ್ನು ಆಸ್ವಾದಿಸಿದೆವು.

ಪಸ್ಚಿಮ ಬಂಗಾಳದ ಹಳ್ಳಿಯ ರಮಣೀಯ ದೃಶ್ಯ


           ತೀಸ್ತಾ ನದಿ ಪಶ್ಚಿಮ-ಬಂಗಾಲ ಮತ್ತು ಸಿಕ್ಕಿಂ ಅನ್ನು ವಿಭಜಿಸುತ್ತದೆ. ಡಾರ್ಜೀಲಿಂಗ್ - ಗ್ಯಾಂಗ್ಟೋಕ್ (Gangtok) ಹಾದಿಯಲ್ಲಿ ಒಂದು ಅಪರೂಪದ ಸಂಗಮವನ್ನು ನೋಡಿದೆವು. ಅದುವೇ ತೀಸ್ತಾ, ರಂಗೀತ್ ನದಿಗಳ ಸಂಗಮ... ನಯನ ಮನೋಹರ ದೃಶ್ಯ. ಇಲ್ಲಿ ಸಿಕ್ಕ ಅನುಭವವೇ ನಮಗಿನ್ನು ಕಚಗುಳಿಯನ್ನು ಉಂಟು ಮಾಡುತ್ತದೆ. ಇಲ್ಲಿ ಸಿಕ್ಕ ಸ್ವಾದಿಷ್ಟ ಚನ್ನಾ ಚ್ಯಾಟ್ ಮತ್ತು ಸೌತೆಕಾಯಿ ಚ್ಯಾಟ್ ನಮ್ಮ ತೀಸ್ತ ನದಿಯ ಅನುಭವವನ್ನು ಮತ್ತಷ್ಟು ಶ್ರೀಮಂತವಾಗಿಸಿತು. ಅಲ್ಲಿಯೇ ನಮಗೆ ತೀಸ್ತ ನದಿಯು ಮುಂದೆ ನಡೆಸುವ ದರ್ಬಾರಿನ ಮುನ್ಸೂಚನೆ ಸಿಕ್ಕಿದ್ದು.
ತೀಸ್ತಾ ಮತ್ತು ರಂಗೀತ್ ನದಿಗಳ ಸಂಗಮ

ಉತ್ತರ ಸಿಕ್ಕಿಂನಲ್ಲಿ ಕಲ್ಲು ಎಸೆದರು ಅದು ಬೀಳುವುದು ತೀಸ್ತ ನದಿಗೆ ಇಲ್ಲವೇ ... ಝರಿಗೆ, ಇಲ್ಲ ... ತೀಸ್ತ ನದಿ ಹರಿಯುವ ಪಾತ್ರವಾಗಿದ್ದ ಜಾಗಕ್ಕೆ ಎನ್ನುವುದು ವಿಧಿತ. ಮೇ ತಿಂಗಳಲ್ಲೇ ಹೆಜ್ಜೆ ಹೆಜ್ಜೆಗೂ ಝರಿ ಮತ್ತು ನದಿಯನ್ನು ಕಾಣುತ್ತಿದ್ದೆವು. ಇನ್ನು ಮಳೆಗಾಲದಲ್ಲಿ ಹೇಗಿದ್ದಿರಬಹುದು?


ಕಣಿವೆಗಳ ಮಧ್ಯ ತೀಸ್ತಾ ನದಿ

ತೀಸ್ತಾ ನದಿಯಿಂದಾದ ಒಂದು ಝರಿ





















ಉತ್ತರ ಭಾಗದ ಸಿಕ್ಕಿಂನಲ್ಲಿ ತೀಸ್ತ ನದಿಯನ್ನು ನಾವು ಬಿಡಲಾರೆವು ಎನ್ನುವಂತಹ ಭಾವ. ನದಿಯ ಹರಿವನ್ನು ಬೆನ್ನೆತ್ತಿದಾಗ, ತಲುಪಿದ್ದು ಉಗಮ ಸ್ಥಾನಕ್ಕೆ. ಸಂತೋಷ ಮಿತಿ ಮೀರಿತ್ತು, ಜೀವನೋತ್ಸ್ಸಾಹ ಉಕ್ಕಿ ಹರಿಯಿತು,
ಆ ಕ್ಷಣ ಆನೆಯಷ್ಟು ಬಲ, ಸ್ಥೈರ್ಯವನ್ನು ತುಂಬಿತ್ತು. 

ಯೂಂತಾಂಗ್ ಕಣಿವೆಗಳ ಮಧ್ಯದಲ್ಲಿ ತೀಸ್ತಾ

ಹೀಗೆ ಇದ್ದ ಆರು ದಿನವು ತೀಸ್ತ ನದಿಯ ಜೊತೆಗೆ ಆಟ ಆಡುತ್ತ ಕಳೆದೆ. ಮೆಲ್ಲಿ ಬಜಾರಿನಲ್ಲಿ(Melli bazaar) ಬ್ರಿದ್ಗ್ ಹತ್ತಿರ ತೀಸ್ತವನ್ನು ಕೊನೆಯ ಬಾರಿಗೆ ಎನ್ನುವಂತೆ ನೋಡಿ ಕಣ್ಣಿನ ಕಮೆರದಲ್ಲಿ ಕ್ಲಿಕ್ಕಿಸಿ ನದಿಗೆ ವಿದಾಯ ಹೇಳಿದರು ತೀಸ್ತ ನಮ್ಮನ್ನು ಬಿಡದೆ ನ್ಯೂ ಜಲಪೈಗುರಿಯ ತನಕವೂ ನಮ್ಮ ಜೊತೆಯಲ್ಲೇ ಹರಿಯುತ್ತಿತ್ತು. ತೀಸ್ತಾವನ್ನು ಬಿಟ್ಟು ಬರುವಾಗ ಆದ ವೇದನೆಯನ್ನು ಹೇಳಲಾರೆ. 

ಮೆಲ್ಲಿ ಬಜಾರ್ ಬ್ರಿಡ್ಜ್ - ತೀಸ್ತಾಗೆ ವಿದಾಯ
ನಂತರ ತೀಸ್ತಾ ನದಿಯ ಹರಿವನ್ನು ತಂಗು(Thangu) ಮತ್ತು ಯಮ್ತಂಗ್(Yumthang) ಕಣಿವೆಗಳಲ್ಲಿ ಆನಂದಿಸಿದೆವು. ಝೀರೋ ಪಾಯಿಂಟ್ನಲ್ಲಿ (Zero-porint i.e North of Yumsedong) ತೀಸ್ತ ನದಿಯಿಂದಾದ ಹಿಮಗಳ ಜೊತೆ ಆಟ ಆಡಿದೆವು. ಮುಂದೆ ನದಿ ದೊಂಕಿಲ್ಲ (Donkia pass) ಪ್ರದೇಶದತ್ತ ಸಾಗುತ್ತದೆ.
ಇಷ್ಟೆಲ್ಲಾ ಅನುಭವಕ್ಕೆ ಪೂರಕವಾದದ್ದು 'ನಡೆದಿಹೆ ಬಾಳೌ ಕಾವೇರಿ' ಲೇಖಕರು ಪ್ರೊ ಬಿ ಜಿ ಎಲ್ ಸ್ವಾಮಿ ಅವರ ಪುಸ್ತಕ. ಈ ಪುಸ್ತಕವನ್ನು ಓದಿದ ಮೇಲೆ ಯಾವುದಾದರು ಒಂದು ನದಿಯ ಹರಿವನ್ನು ಪೂರ್ತಿ ಅನುಭವಿಸಬೇಕು ಆನಂದಿಸಬೇಕು ಎಂಬ ತುಡಿತ ನನ್ನಲ್ಲಿತ್ತು. ನನ್ನ ಅದೃಷ್ಟಕ್ಕೆ ನನ್ನ ಅರಿವಿಲ್ಲದೆ ತೀಸ್ತ ನದಿಯು ನನಗೆ ಎಲ್ಲ ಅನುಭವಗಳನ್ನು ಒದಗಿಸಿ ಕೊಟ್ಟಿತು. ಪ್ರಕೃತಿಯೇ ಒಂದು ವಿಸ್ಮಯ. ಅದರಲ್ಲೂ ಹಿಮಾಲಯ ಶ್ರೇಣಿಗಳ ತುಂಬಾ ಹೇಳಲಾರದಷ್ಟು ಕಾಣಲಾರದಷ್ಟು ಊಹಿಸಲಾರದಷ್ಟು ವಿಸ್ಮಯ ತುಂಬಿದೆ. 

ತೀಸ್ತಾ ನದಿಯ ಉಗಮ ಚೋಲಮೋ ಕೆರೆ(Tso Lhamo Lake). ಇದು ಪೂರ್ವ-ಹಿಮಾಲಯ ಶ್ರೇಣಿಯ 17500 ಅಡಿ ಎತ್ತರದಲ್ಲಿ ಇದೆ. ಅಲ್ಲಿಂದ ನದಿಯು ತಂಗು(Thangu),  ಯೂಂಥಾಂಗ್ (Yumthang), ದೊಂಕಿಯ ಕಣಿವೆಗಳಲ್ಲಿ(Donkia pass) ಹರಿದು, ರಂಗ್ಪೋ(Rangpo), ನ್ಯೂ ಜಲಪೈಗುರಿ(New Jalpaiguri) ಪ್ರದೇಶಗಳ ಮುಖಾಂತರ ಸಾಗಿ ಕೊನೆಗೆ ಬ್ರಹ್ಮಪುತ್ರ ವನ್ನು ಸೇರುತ್ತದೆ.


ತೀಸ್ತಾ ನದಿಯ ನೀರು.. - ಶುಚಿ, ರುಚಿ, ಬಣ್ಣ