ಅದೊಂದು ಊರ ಹೊರಗಿರುವ ಜನನಿಬಿಡ ಪ್ರದೇಶ.. ಅಲ್ಲೊಂದು ದೊಡ್ಡ ಮನೆ, ಸುತ್ತಲು ಪ್ರಶಾಂತವಾದ ವಾತಾವರಣ.. ಶುದ್ಧವಾದ ಗಾಳಿ, ಯಥೇಚ್ಚವಾದ ಬೆಳಕು. ಒಳಗೆ ಅಲ್ಲಲ್ಲಿ ಮಕ್ಕಳ ಗುಂಪು.. ಅವರೆಡೆಗೆ ನೋಟ ಹರಿಸಿದರೆ ರಾಶಿ ಮುಗುಳ್ನಗೆ ಸಿಕ್ಕಿತು.. ಹಾ....
ನಾ ಈಗ ಹೇಳ ಹೊರಟಿರುವುದು "ಶ್ರೀ ಸಾಯಿ ರಂಗ ವಿದ್ಯಾ ಸಂಸ್ಥೆ (ಕಿವುಡ ಮಕ್ಕಳಿಗೆ), ಮೈಸೂರು" ಬಗ್ಗೆ.
ಇಲ್ಲಿ ಗಂಡು ಮಕ್ಕಳಿಗೆ 1ರಿಂದ - 10ನೇ ತರಗತಿವರೆಗೆ ಉಚಿತ ವಸತಿ ಮತ್ತು ವಿದ್ಯಾಭ್ಯಾಸಕ್ಕೆ ಅನುಕೂಲವಿದೆ. ಅದರ ಜೊತೆಗೆ ಜೀವನಕ್ಕೆ ಉಪಯೋಗವಾಗುವಂತ ಅನೇಕ ಕರಕುಶಲ ಕಲೆಗಳನ್ನು (ಟೇಲರಿಂಗ್, ಕಂಪ್ಯೂಟರ್ ಜ್ಞಾನ, ಅಡುಗೆ ಕೆಲಸ) ಸಹ ಹೇಳಿಕೊಡುತ್ತಾರೆ.
ಇಲ್ಲಿಯ ಮಕ್ಕಳಿಗೆ ಕಿವಿ ಕೇಳದಿದ್ದರೂ, ಮಾತು ಬರದಿದ್ದರೂ ಜೀವನದ ಬಗೆಗಿನ ಅವರ ಉತ್ಸಾಹ ಮೆಚ್ಚುವಂತದ್ದು. ಸಹಾಯ, ಶಿಸ್ತು, ವಿಧೇಯತೆಗಳಲ್ಲಿ ಒಂದು ಹೆಜ್ಜೆ ಮುಂದು. ಈ ಮಕ್ಕಳ ಬೆನ್ನನು ತಟ್ಟಿ, ಅವರಡೆಗೆ ಸ್ವಲ್ಪ ಗಮನ ಹರಿಸಿ ಚೆನ್ನಾಗಿದೆ, ಇನ್ನೂ ಉತ್ತಮವಾಗಬೇಕು, ಸುಧಾರಿಸು ಎಂದು ಹೇಳಿದರೆ ಅವರಿಗೆ ಖುಷಿಯೋ ಖುಷಿ. ಇನ್ನೂ ಪ್ರಶಂಸೆ ಮಾಡಿ ಬೆನ್ನ್ನು ತಟ್ಟಿದರೆ, ತಲೆ ಸವರಿದರೆ ಅಪರಿಮಿತ ಹಿಗ್ಗು. ಸ್ಪರ್ಶ ಸುಖವನ್ನು ಸಾಮಾನ್ಯ ಮಕ್ಕಳಿಗಿಂತ ಹೆಚ್ಚು ಅನುಭವಿಸಿದರು.
ಸಾಮಾನ್ಯವಾಗಿ ಕಿವುಡ, ಮೂಗ ಮಕ್ಕಳಿಗೆ ಸ್ಪೀಚ್ ಥೆರಪಿ ಕೊಡಲಾಗುತ್ತದೆ. ಸಾಮಾನ್ಯವಾಗಿ ಸ್ಪೀಚ್ ಥೆರಪಿ ಶಾಲೆಗಳಲ್ಲಿ ಶುಲ್ಕ ಹೆಚ್ಚು ( ಕಾರಣ: ದುಬಾರಿಯಾದ ಶ್ರವಣ ಸಾಧನಗಳು ಮತ್ತು ಸಂಬಂಧ ಪಟ್ಟಸಾಮಗ್ರಿಗಳು). ಇದರಲ್ಲಿ ತಾಯಿಯ ಅಥವಾ ಮನೆಯವರ ಶ್ರಮ, ಅಗತ್ಯ ಮತ್ತು ಸಮಯ ಬಹು ಮುಖ್ಯ. ಮಗುವಿನೊಂದಿಗೆ ತಾಯಿಯೂ ಸಹ ಶಾಲೆಯಲ್ಲಿ ಇದ್ದು, ಕಲಿತು, ಮಗುವಿಗೆ ಕಲಿಸಬೇಕು. ಮನೆಯಲ್ಲಿಯೂ ಸಹ ಕಲಿಕೆ ಮುಂದುವರೆಸುವ ಅಗತ್ಯ ಬಹಳ. ಆದರೆ ಬಡ ತಂದೆ, ತಾಯಿಗಳಿಗೆ, ಜೀವನೋಪಾಯಕ್ಕಾಗಿ ಕೆಲಸಕ್ಕೆ ಹೊರಹೋಗುವ ತಾಯಿಯರಿಗೆ ಇದು ಮರೀಚಿಕೆ ಮತ್ತು ಅಸಾಧ್ಯ(ಆತಿ ಹೆಚ್ಚು ಶುಲ್ಕ, ಸಮಯದ ಅಭಾವ) . ಅಂತಹವರಿಗೆ "ಸಾಯಿ ರಂಗ ವಿದ್ಯಾ ಸಂಸ್ಥೆ" ಒಂದು ವರ.
ಶಾಲೆಯ ಪರಿಸರ, ಅಡುಗೆಮನೆಯ ಶುಚಿತ್ವ, ಮಲಗುವ ಕೋಣೆಯ ವ್ಯವಸ್ಥೆ ಬಲು ಅಚ್ಚುಕಟ್ಟು.
ಮಕ್ಕಳು ಎಲ್ಲ ತರಹದ ಕೆಲಸ ಮಾಡುವಷ್ಟು ತರಬೇತಿ ಪಡೆದಿದ್ದಾರೆ.
ಮಕ್ಕಳಿಗೆ ಪಾಠ ಹೇಳಿಕೊಡುವ ವಿಧಾನವು ಸಹ ಅತ್ಯಕರ್ಷಕವಾಗಿದೆ. ನಾವು ಸಹ ಅಂತಹ ಉತ್ತಮ ವಿಧಾನದಲ್ಲಿ ಕಲಿತಿಲ್ಲವೇನೋ ಎಂಬ ಭಾವನೆ ಉಂಟಾಯಿತು. 9 ನೆ ತರಗತಿಗೆ, ಮುದ್ದಣ, ಮನೋರಮೆಯರ ಕವಿ-ಪರಿಚಯ ಬೋರ್ಡ್ ಮೇಲೆ ಬರೆದು ಹೇಳಿಕೊಟ್ಟ ರೀತಿ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಇನ್ನು 3 ನೆ ತರಗತಿ ಮಕ್ಕಳಿಗೆ ಏರಿಕೆ, ಇಳಿಕೆ ಕ್ರಮ ಹೇಳಿಕೊಟ್ಟಿರುವ ರೀತಿ ಬಲು ಅಧ್ಬುತ. ವಿವರಕ್ಕಾಗಿ ಕೆಳಗಿನ ಚಿತ್ತ್ರವನ್ನು ನೋಡಿ.

ವಿಳಾಸ:
ಶ್ರೀ ಸಾಯಿ ರಂಗ ವಿದ್ಯಾ ಸಂಸ್ಥೆ (ಕಿವುಡ ಮಕ್ಕಳಿಗೆ), ಮೈಸೂರು
No 764/A, "B" Layout
Bannimantap, Mysore 570015
ಹೆಚ್ಚಿನ ವಿವರಕ್ಕಾಗಿ ಈ ಬ್ಲಾಗ್ ನೋಡಿ...